ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಮೃತಪಟ್ಟಿದ್ದಾರೆ.
ದೇವದುರ್ಗದ ನಿಲವಂಜಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕಾರ್ಮಿಕರು ಛತ್ತೀಸ್‌ಗಢದ ಮೂಲದವರಾದ ಶಿವರಾಮ್, ಬಲರಾಮ್ ಹಾಗೂ ವಿಷ್ಣು ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಬೋರ್‌ವೆಲ್ ಕೊರೆದು ಕಾಲುದಾರಿಯಲ್ಲಿಯೇ ಮೂವರು ಮಲಗಿದ್ದರು. ಬೆಳಗ್ಗೆ ಬಂದ ಜೆಸಿಬಿ ಜನರ ಮೇಲೆಯೇ ಹರಿದಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.