ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗ ಸ್ನೇಹಿತನೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಇಬ್ಬರೂ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆಸೊಯ್ದು ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಗ್ವಾಲಿಯರ್‌ನ ದಾಬ್ರಾ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೋನಿಯಲ್ಲಿ ನಡೆದಿದೆ. ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆಗಿತ್ತು.
ಆರೋಪಿಗಳಲ್ಲಿ ಒಬ್ಬ ಮನೆ ಮಾಲೀಕನ ಮಗ, ಮಾಹಿತಿ ಪ್ರಕಾರ ಇಬ್ಬರು ಹುಡುಗರು ಬಾಲಕಿಗೆ ಚಾಕೊಲೇಟ್ ಕೊಟ್ಟು ಕಾರಿನಲ್ಲಿ ಕೂರಿಸಿ ಕೊರೆದೊಯ್ದಿದ್ದಾರೆ. ಕಾರಿನೊಳಗೆ ಅವರು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಆ ಮಗುವಿನ ಬಳಿ ಮನೆಯಲ್ಲಿ ಯಾರಿಗೂ ಏನೂ ಹೇಳಬೇಡ ಎಂದು ಹೇಳಿ ಮನೆಯ ಬಳಿ ಬಿಟ್ಟು ಹೋಗಿದ್ದಾರೆ. ಆದರೆ, ಹುಡುಗಿ ತನ್ನ ತಾಯಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದಳು. ನಂತರ ಆಕೆಯ ಪೋಷಕರು ನೇರವಾಗಿ ದಾಬ್ರಾ ನಗರ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರೂ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದರು.