ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷದ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿರಿಷಾ ಹಾಗೂ ಮಂಜುನಾಥ್ ದಂಪತಿಗಳ ಪುತ್ರನಾದ ಗೌತಮ್ (3) ಸ್ವತಃ ಚಿಕ್ಕಪ್ಪನಿಂದಲೇ ಕೊಲೆಯಾದ ಬಾಲಕ.
ಬಾಲಕನ ಚಿಕ್ಕಪ್ಪ ರಂಜಿತ್ (30)ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ರಂಜಿತ್ ಕಾಡಿನಲ್ಲಿ ಅವಿತುಕೊಂಡಿದ್ದ. ರಾತ್ರಿಯಿಡೀ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ರಂಜಿತ್ನನ್ನು ಅರೆಸ್ಟ್ ಮಾಡಿದ್ದಾರೆ.
ಮೂರು ವರ್ಷದ ಮಗುವನ್ನು ಎತ್ತಿಕೊಂಡು ಪಾಳುಬಿದ್ದ ಮನೆಗೆ ಕರೆತಂದು ಕತ್ತು ಸೀಳಿ ಕೊಂದಿದ್ದಾನೆ. ಈತ ಮಾತನಸಿಕ ಅಸ್ವಸ್ಥ ಎಂದೂ ಹೇಳಲಾಗಿದೆ. ಆರೋಪಿ ವಿರುದ್ಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.