ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಪಣಂಬೂರು ಬೀಚ್‌ನಲ್ಲಿ ನೀರಾಟವಾಡಲು ತೆರಳಿದ್ದ ಮೂರು ಮಂದಿ ಯುವಕರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಮಿಲನ್ (೨೦), ಲಿಖಿತ್ (೧೮)ಮತ್ತು ನಾಗರಾಜ್ (೨೪) ನಾಪತ್ತೆಯಾದವರು.
ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಲಿಖಿತ್ ಕೈಕಂಬದ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ನಾಗರಾಜ್ ಬೈಕಂಪಾಡಿಯಲ್ಲಿರುವ ಕಂಪನಿಯೊಂದರಲ್ಲಿಮೇಲ್ವಿಚಾರಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಭಾನುವಾರ ರಜಾದಿನವಾದ್ದರಿಂದ ಇವರು ಪಣಂಬೂರು ಬೀಚ್‌ಗೆ ತೆರಳಿದ್ದು, ನೀರಾಟವಾಡುತ್ತಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದರು ಎನ್ನಲಾಗಿದೆ. ಇವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.