ಹೊಸದಿಗಂತ ಡಿಜಿಟಲ್ ಡೆಸ್ಕ್:
38 ವರ್ಷಗಳ ಬಳಿಕ ದಿಗ್ಗಜ ನಟ ಕಮಲ್ ಹಾಸನ್ ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಒಂದಾಗಿ ಮಾಡಿರೋ ಚಿತ್ರ ‘ಥಗ್ ಲೈಫ್’. ಈ ಬೃಹತ್ ಬಜೆಟ್ (300 ಕೋಟಿ) ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಮದ್ರಾಸ್ ಟಾಕೀಸ್ ಮತ್ತು ರಾಜಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ನಿರ್ಮಿತವಾಗಿದ್ದ ಈ ಚಿತ್ರವು 5ನೇ ತಾರೀಖು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ಸಿನಿಮಾ ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲದೇ ತೀವ್ರ ವಿಮರ್ಶೆಗಳಿಗೆ ಗುರಿಯಾಯಿತು.
ಚಿತ್ರದ ‘ಮುತ್ತ ಮಲೈ’ ಹಾಡು ಪ್ರಚಾರ ಸಮಯದಲ್ಲಿ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಸಿನಿಮಾದಲ್ಲಿ ಆ ಹಾಡು ಇಲ್ಲದಿರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ತಂದಿತು. ತೆಲುಗು ರಾಜ್ಯಗಳಲ್ಲಿ ಈ ಚಿತ್ರ ಕೇವಲ 3 ಕೋಟಿ ಗಳಿಸಿದರೂ, ವಿತರಕರು 13 ಕೋಟಿ ಬಂಡವಾಳ ಹೂಡಿದ್ದರು. ಈ ಕಾರಣದಿಂದಾಗಿ 10 ಕೋಟಿ ನಷ್ಟ ಸಂಭವಿಸಿದೆ.
ಈ ಬಗ್ಗೆ ಮಣಿರತ್ನಂ ಸ್ಪಷ್ಟನೆ ನೀಡಿದ್ದು, “ನಾವು ಪ್ರೇಕ್ಷಕರು ನಿರೀಕ್ಷಿಸಿದ ಸಿನಿಮಾಗಿಂತ ವಿಭಿನ್ನವಾದ ಚಿತ್ರ ಮಾಡಿದ್ದೇವೆ. ಆದರೆ ‘ನಾಯಗನ್’ ಮಟ್ಟದ ಸಿನಿಮಾ ನಿರೀಕ್ಷಿಸಿದ್ದವರಿಗೆ ನಾನು ಕ್ಷಮೆ ಕೇಳುತ್ತೇನೆ,” ಎಂದು ಹೇಳಿದರು. OTT ರೈಟ್ಸ್ 148 ಕೋಟಿಗೆ ಮಾರಾಟವಾಗಿದ್ರೂ, ಅದರ ಸ್ಟ್ರೀಮಿಂಗ್ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.
ಈ ಸಿನಿಮಾ ಥಿಯೇಟರ್‌ಗಳಲ್ಲಿ ವಿಫಲವಾದರೂ, OTTಯಲ್ಲಿ ಹೊಸ ಶಕ್ತಿ ಪಡೆದುಕೊಳ್ಳಬಹುದೆಂದು ನಿರೀಕ್ಷೆಯಿದೆ. ಕಳೆದ ದಿನಗಳಲ್ಲಿ ಥಿಯೇಟರ್‌ಗಳಲ್ಲಿ ವಿಫಲವಾದ ಹಲವಾರು ಸಿನಿಮಾಗಳು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಯಶಸ್ವಿಯಾಗಿ ಓಡಿದ್ದು ಇದೇ ಚಿತ್ರಕ್ಕೂ ಸಾಧ್ಯವೇ ಎಂಬ ಪ್ರಶ್ನೆ ಪ್ರಸ್ತುತವಿದೆ.