ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಬಳಿ ಸ್ಟೀಲ್ ಟಿಫಿನ್ ಬಾಕ್ಸ್ ಸ್ಫೋಟಗೊಂಡು 17 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ರಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಂದಿ ಆಯುವ ತನ್ನ ಅಜ್ಜ ಸಂಗ್ರಹಿಸಿದ್ದ ಟಿಫಿನ್ ಬಾಕ್ಸ್ ಅನ್ನು ತೆರೆಯಲು ಮುಂದಾಗಿದ್ದನು.ಈ ವೇಳೆ ಬಾಕ್ಸ್ ಸ್ಫೋಟಗೊಂಡು ಬಾಲಕ ಗಂಭೀರವಾಗಿ ಗಾಯಗೊಂಡಿದ್ದನು. ಬಾಲಕನನ್ನು ಬ್ಯಾರಕ್‌ಪೋರ್‌ನಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇನ್ನು ಸ್ಟೀಲ್ ಟಿಫಿನ್ ಬಾಕ್ಸ್ ಎತ್ತಿಕೊಂಡು ತಮ್ಮ ಮನೆಯೊಳಗೆ ತಂದಿದ್ದು, ಅದನ್ನು ತೆರೆದು ನೋಡುವಂಯೆ ಮೃತ ಬಾಲಕನಿಗೆ ಅವರ ಅಜ್ಜ ಅಬ್ದುಲ್ ಹಮೀದ್ ಹೇಳಿದ್ದರು. ಆದರೆ ಬಾಕ್ಸ್ನಲ್ಲಿ ಏನಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ.