IPL | ಆರ್‌ಸಿಬಿ ಮ್ಯಾಚ್‌ಗೆ ಬಿಗಿ ಭದ್ರತೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1,600 ಪೊಲೀಸರ ನಿಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

2025ರ ಐಪಿಎಲ್ ಹಂಗಮಾ ಮತ್ತೆ ಶುರುವಾಗಿದ್ದು ಅಭಿಮಾನಿಗಳಲ್ಲಿ ಕಾತರತೆ ಹೆಚ್ಚಿದೆ.  ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆಯ ಬಳಿಕ ಐಪಿಎಲ್ ಪುನರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ನಡೆಯದಂತೆ ಚಿನ್ನಸ್ವಾಮಿ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕೆಕೆಆರ್​​ ಮತ್ತು ಆರ್​ಸಿಬಿ ನಡುವಿನ ಈ ಮಹತ್ವದ ಐಪಿಎಲ್​ ಪಂದ್ಯಕ್ಕೆ 1,600 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಇದರಲ್ಲಿ ನಾಲ್ವರು ಡಿಸಿಪಿ ಅಧಿಕಾರಿಗಳು, 12 ಎಸಿಪಿ, 28 ಇನ್​​ಸ್ಪೆಕ್ಟರ್, 80 ಸಬ್ ಇನ್​​ಸ್ಪೆಕ್ಟರ್ ಸೇರಿ 1600 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಕ್ಯೂಆರ್​ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನಿಯೋಜನೆ ಮಾಡಲಾಗಿರುತ್ತದೆ. 4 ಕೆಎಸ್ಆರ್​ಪಿ ತುಕಡಿ, ಹೋಂಗಾರ್ಡ್ಸ್ ಕೂಡ ಭದ್ರತೆ ನೀಡಲಿದ್ದಾರೆ.

ಪಂದ್ಯ ಶುರುವಾಗುವ ಮೊದಲೇ ಪ್ರತಿ 2 ಗಂಟೆಗಳಿಗೊಮ್ಮೆ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್​ನಿಂದ ತಪಾಸಣೆ ನಡೆಸಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯದ ಉದ್ವಿಗ್ನತೆಯಿಂದ ಒಂದು ವಾರ ಮುಂದೂಡಿಕೆ ಆಗಿದ್ದ ಐಪಿಎಲ್ ಚಿನ್ನಸ್ವಾಮಿಯಲ್ಲಿ ಆರಂಭವಾಗುತ್ತಿದೆ. ನಕಲಿ ಟಿಕೆಟ್​ಗೂ ಬ್ರೇಕ್ ಹಾಕಲಾಗುತ್ತದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲಿನ ರಸ್ತೆಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ವೀನ್ಸ್ ರಸ್ತೆ, ಕಬ್ಬನ್ ಪಾರ್ಕ್ ಜಂಕ್ಷನ್, ಎಂಜಿ ರಸ್ತೆ ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್​ಗಳಲ್ಲೂ ಭದ್ರತಾ ಸಿಬ್ಬಂದಿ ಇರುತ್ತಾರೆ. ಮಫ್ತಿಯಲ್ಲೂ ಸ್ಟೇಡಿಯಂ ಸುತ್ತಮುತ್ತ ಪೊಲೀಸರ ಹದ್ದಿನ ಕಣ್ಣು ಇಟ್ಟಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!