SHOCKING | ಪೆಟಿಕೋಟ್‌, ಧೋತಿ ಬಿಗಿಯಾಗಿ ಕಟ್ಟೋದ್ರಿಂದ ‘ಪೆಟಿಕೋಟ್‌ ಕ್ಯಾನ್ಸರ್‌’ ಬಾಧಿಸಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತಿ ದಿನ ಸೀರೆ ಉಡುವ ಹಾಗೂ ಚೂಡಿದಾರ್‌ ತೊಡುವ ಮಹಿಳೆಯರು ಹಾಗೂ ಪ್ರತಿದಿನ ಪಂಚೆ ಹಾಗೂ ಧೋತಿ ಧರಿಸುವ ಪುರುಷರು ಈ ಸುದ್ದಿಯನ್ನು ಓದಲೇಬೇಕು. ಲುಂಗಿ ಅಥವಾ ಸೀರೆ ಜಾರಬಾರದೆಂದು ಬಿಗಿಯಾಗಿ ಕಟ್ಟುವ ಗಂಟಿನಿಂದ ಕ್ಯಾನ್ಸರ್‌ ಬಾಧಿಸಬಹುದು.

ಹೌದು, ಚರ್ಮದ ಉಸಿರಾಟಕ್ಕೆ ಇದರಿಂದ ತೊಂದರೆ ಆಗುವ ಕಾರಣ ಕ್ಯಾನ್ಸರ್ ಬರಬಹುದು ಎಂದು ವರದಿಗಳು ಎಚ್ಚರಿಸಿವೆ. ಇದನ್ನ ಪೆಟಿಕೋಟ್ ಕ್ಯಾನ್ಸರ್ ಅಥವಾ ಸೀರೆ ಕ್ಯಾನ್ಸರ್ ಎಂದು ಕರೆಯಲಾಗಿದೆ. ದೀರ್ಘ ಕಾಲದ ವರೆಗೆ ಒಂದೇ ಜಾಗದಲ್ಲಿ ಬಿಗಿಯಾದ ಗಂಟು ಕಟ್ಟುವುದರಿಂದ ಸೊಂಟದ ಭಾಗದ ಚರ್ಮಕ್ಕೆ ಹಾನಿಯಾಗಬಹುದು. ಇದರಿಂದಾಗಿ ಚರ್ಮದ ತುರಿಕೆ, ಹುಣ್ಣುಗಳು ಆಗುವುದಲ್ಲದೆ ಮಾರಣಾಂತಿಕ ಕ್ಯಾನ್ಸರ್ ಕೂಡ ವಕ್ಕರಿಸಬಹುದು ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

ಸೊಂಟದ ಭಾಗದಲ್ಲಿ ಚರ್ಮ ಕಪ್ಪಾಗುವಿಕೆ, ಸೊಂಟದ ಸುತ್ತ ಚರ್ಮ ದಪ್ಪವಾಗುವುದು, ಚರ್ಮ ಒರಟಾಗುವಿಕೆ, ಬಿರುಕು ಬಿಡುವುದು ಇದರ ಲಕ್ಷಣಗಳಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here