January19, 2026
Monday, January 19, 2026
spot_img

ಶಾಂತಿ ಮಾತುಕತೆಗೆ ಟೈಮ್ ಕೂಡಿ ಬರ್ತಿಲ್ಲ: ಕೈವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ, ಓರ್ವ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್–ರಷ್ಯಾ ಯುದ್ಧ ಶಮನದ ಕುರಿತ ಮಹತ್ವದ ಮಾತುಕತೆಗೆ ಸಿದ್ಧತೆ ನಡೆಯುತ್ತಿರುವ ನಡುವೆಯೇ, ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಭಾರೀ ದಾಳಿ ನಡೆಸಿದೆ. ಶನಿವಾರ ನಡೆದ ಈ ದಾಳಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮುಂಜಾನೆಯಿಂದಲೇ ಕೈವ್‌ನ ಹಲವು ಪ್ರದೇಶಗಳಲ್ಲಿ ಪ್ರಬಲ ಸ್ಫೋಟಗಳು ಕೇಳಿಬಂದಿವೆ. ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ವಸತಿ ಪ್ರದೇಶಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ:

ಈ ದಾಳಿಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ಶಾಂತಿ ಮಾತುಕತೆ ನಡೆಯಲಿರುವ ಸಮಯದಲ್ಲೇ ಈ ದಾಳಿ ನಡೆದಿದೆ. ಇದು ರಷ್ಯಾ ಶಾಂತಿಗೆ ಸಿದ್ಧವಿಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಯಲಿರುವ ಮಾತುಕತೆಯಲ್ಲಿ ದೀರ್ಘಾವಧಿ ಭದ್ರತಾ ಭರವಸೆಗಳು ಮತ್ತು ವಿವಾದಿತ ಪ್ರದೇಶಗಳ ಭವಿಷ್ಯ ಪ್ರಮುಖ ಅಂಶಗಳಾಗಲಿವೆ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಉಕ್ರೇನ್‌ಗೆ ಬೆಂಬಲವಾಗಿ ಕೆನಡಾ 1.8 ಶತಕೋಟಿ ಡಾಲರ್ ಆರ್ಥಿಕ ನೆರವು ಘೋಷಿಸಿದೆ. ದಾಳಿಯ ನಂತರ ನೆರೆಯ ಪೋಲೆಂಡ್ ಗಡಿಯ ಸಮೀಪದ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿ ವಾಯುಪಡೆಯನ್ನು ಎಚ್ಚರಿಕೆಯಲ್ಲಿ ಇರಿಸಿದೆ.

Must Read