ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ (Kerala) ಫೆಲೆಸ್ತೀನ್ ಪರ ರ‍್ಯಾಲಿಯಲ್ಲಿ ಮಾಜಿ ಹಮಾಸ್ (Hamas) ಮುಖ್ಯಸ್ಥ ಖಲೀದ್ ಮಶಾಲ್ ಭಾಗವಹಿಸಿದ್ದಕ್ಕೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಆಘಾತ ವ್ಯಕ್ತಪಡಿಸಿದ್ದಾರೆ.
ಹಮಾಸ್ ಅನ್ನು ಭಾರತದ (India) ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಂಬಲಾಗುತ್ತಿಲ್ಲ, ಹಮಾಸ್ ಭಯೋತ್ಪಾದಕ ಖಲೀದ್ ಮಶಾಲ್ ಕತಾರ್‌ನಿಂದ ಕೇರಳದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಹಿಂದುತ್ವ ಮತ್ತು ವರ್ಣಭೇದ ಪ್ರತಿಪಾದಿಸುವ ಜಿಯೋನಿಜಂ (ಯಹೂದಿಗಳ ರಾಷ್ಟ್ರೀಯವಾದಿ ನೀತಿ) ಅನ್ನು ಬೇರು ಸಮೇತ ಕಿತ್ತೊಗೆಯಿರಿ ಎಂದು ಕರೆ ಕೊಟ್ಟಿದ್ದಾನೆಂದು ಇಸ್ರೇಲಿ ರಾಯಭಾರಿ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಹಮಾಸ್ ಅನ್ನು ಭಾರತದ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಸಮಯ ಬಂದಿದೆ ಎಂದು ಗಿಲೋನ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
Unbelievable😮! #HamasTerrorist Khaled Mashal speaks from Qatar in a #Kerala event under the slogan ‘Uproot bulldozer Hindutva & Apartheid Zionism’.
Mashal calls participants to:
1. Take the streets and show anger.
2. Prepare for jihad (on Israel).
3. Support Hamas… pic.twitter.com/RH7nyAkEbN— Naor Gilon (@NaorGilon) October 29, 2023