16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವ ಸಮಯ ಬಂದಿದೆ: ನೂತನ ದಂಪತಿಗೆ ಸಿಎಂ ಸ್ಟಾಲಿನ್ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಚೆನ್ನೈನಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಡೆಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ನೀಡಿದ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ದಂಪತಿ ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕೆಂದು ಹೇಳಿದ ಸ್ಟಾಲಿನ್, ಬಹುಶಃ ದಂಪತಿಗಳಿಗೆ 16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಸ್ಟಾಲಿನ್ ತಮ್ಮ ಭಾಷಣದಲ್ಲಿ, ಹಿಂದಿನ ಕಾಲದಲ್ಲಿ ಹಿರಿಯರು ನವ ವಿವಾಹಿತ ದಂಪತಿಗಳಿಗೆ 16 ರೂಪದ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುತ್ತಿದ್ದರೆ, ಬಹುಶಃ ಈಗ 16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ನೀಡುವ ಸಮಯ ಬಂದಿದೆ ಎಂದಿದ್ದಾರೆ.

ಹಿರಿಯರು ನಿಮಗೆ 16 ಸಿಕ್ಕಿ ಸಮೃದ್ಧವಾಗಿ ಬಾಳಿ ಎಂದು ನವ ದಂಪತಿಗೆ ಹರಸುತ್ತಾರೆ. ಅದು 16 ಮಕ್ಕಳಲ್ಲ ಬದಲಾಗಿ 16 ಐಶ್ವರ್ಯದ ರೂಪಗಳ ಅರ್ಥ. ಇದನ್ನು ಲೇಖಕ ವಿಶ್ವನಾಥನ್ ಅವರು ತಮ್ಮ ಪುಸ್ತಕದಲ್ಲಿ ‘ಗೋವು, ಮನೆ, ಹೆಂಡತಿ, ಮಕ್ಕಳು, ಶಿಕ್ಷಣ, ಕುತೂಹಲ, ಜ್ಞಾನ, ಶಿಸ್ತು, ನೆಲ, ಜಲ, ವಯಸ್ಸು, ವಾಹನ, ಚಿನ್ನ, ಆಸ್ತಿ, ಕೊಯ್ಲು ಮತ್ತು ಪ್ರಶಂಸೆ’ ಎಂದು ಉಲ್ಲೇಖಿಸಿದ್ದಾರೆ ಎಂದು ಸ್ಟಾಲಿನ್ ಹೇಳಿದರು.

ಆದರೆ ಈಗ ಯಾರೂ 16 ರೀತಿಯ ಸಂಪತ್ತನ್ನು ಪಡೆಯಲು ನಿಮ್ಮನ್ನು ಆಶೀರ್ವದಿಸುತ್ತಿಲ್ಲ. ಅವರು ನಿಮಗೆ ಸಾಕಷ್ಟು ಮಕ್ಕಳನ್ನು ಹೊಂದಲು ಮತ್ತು ಸಮೃದ್ಧವಾಗಿ ಬದುಕಲು ಮಾತ್ರ ಆಶೀರ್ವದಿಸುತ್ತಾರೆ. ಇತ್ತೀಚೆಗೆ ಲೋಕಸಭಾ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ಜನಸಂಖ್ಯೆಗೆ ಆಧಾರವಾಗಿ ಲೋಕಸಭಾ ಕ್ಷೇತ್ರಗಳನ್ನು ವಿಂಗಡಣೆ ಮಾಡುವುದರಿಂದ ಜನರು ಹೆಚ್ಚೆಚ್ಚು ಮಕ್ಕಳನ್ನು ಹೊಂದುವುದು ಉತ್ತಮ. ಇಂದು, ಲೋಕಸಭೆ ಕ್ಷೇತ್ರಗಳು ಕಡಿಮೆಯಾಗುತ್ತಿರುವ ಸನ್ನಿವೇಶವಿರುವುದರಿಂದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಕಡಿಮೆ ಮಕ್ಕಳನ್ನು ಹೊಂದಲು ನಮ್ಮನ್ನು ಏಕೆ ನಿರ್ಬಂಧಿಸಬೇಕು, ನಾವು 16 ಮಕ್ಕಳನ್ನು ಹೊಂದುವ ಗುರಿ ಇಟ್ಟುಕೊಳ್ಳಬಾರದು ಏಕೆ ಎಂದು ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!