ಬೈಕ್‌ಗೆ ಟಿಪ್ಪರ್ ಡಿಕ್ಕಿ: ಕಾಲು ಕಳೆದುಕೊಂಡ ಸವಾರ

ಹೊಸದಿಗಂತ ವರದಿ,ವಿಜಯಪುರ:

ಟಿಪ್ಪರ್ ವಾಹನ ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಒಂದು ಕಾಲು ಮುರಿದುಕೊಂಡು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ
ದೇವರಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ನಡೆದಿದೆ.

ಪಟ್ಟಣದ ನಿವಾಸಿ, ಶಿಕ್ಷಕ ದೇಸಾಯಿ ಕಾಲು ಮುರಿದುಕೊಂಡು ತೀವ್ರ ಗಾಯಗೊಂಡ ದುರ್ಧೈವಿ.

ಈ ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ವಾಹನ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಸ್ಥಳೀಯರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ದೇವರಹಿಪ್ಪರಗಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!