“ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ” ಅನ್ನೋದು ನಿಜ. ಆದರೆ ಅದೆಷ್ಟು ಸುಖವಾಗಿ ಮಲಗುತ್ತಿದ್ದರೂ, ಪಕ್ಕದವನು ಗೊರಕೆ ಹೊಡೆಯಲು ಶುರು ಮಾಡಿದರೆ ನಿದ್ದೆ ಮಾಡೋದು ಅಷ್ಟಕಷ್ಟೇ ಬಿಡಿ. ಗೊರಕೆ ಅಥವಾ snoring ಸಮಸ್ಯೆ ಸಾಮಾನ್ಯವಾದರೂ, ಕೆಲವರಲ್ಲಿ ಇದು ತೀವ್ರವಾಗಿದ್ದು ಇತರರ ನಿದ್ದೆ ಕೆಡಿಸುವ ಮಟ್ಟದ ತೊಂದರೆ ಕೊಡಬಹುದು. ಅಧ್ಯಯನಗಳ ಪ್ರಕಾರ ಶೇ.45ರಷ್ಟು ಜನರಿಗೆ ಗೊರಕೆ ಸಮಸ್ಯೆ ಇದೆ.
ಇದು ಇಂದು ಅಥವಾ ಇತ್ತೀಚೆಗೆ ಉದ್ಭವಿಸಿದ ಸಮಸ್ಯೆಯಲ್ಲ. ರಾಮಾಯಣದಲ್ಲೂ ಕುಂಭಕರ್ಣನ ಗೊರಕೆ ಮೈಲುಗಟ್ಟಲೆ ದೂರ ಕೇಳಿಸಿತ್ತಂತೆ! ಆ ಕಾಲದಲ್ಲಿ ಈ ವಿಷಯವನ್ನೇ ಮನೋರಂಜನೆಯಾಗಿ ಉಪಯೋಗಿಸಿದರೂ, ಇಂದಿನ ದಿನಗಳಲ್ಲಿ ಗೊರಕೆ ತೊಂದರೆ ಆಗಿ ಪರಿಣಮಿಸಿದೆ. ಯಾಕೆ ಗೊರಕೆ ಬರುತ್ತದೆ ಅನ್ನೋದಕ್ಕೆ ಹಲವು ಕಾರಣಗಳಿವೆ — ಗಂಟಲಿನ ಸ್ನಾಯುಗಳು ವಿಶ್ರಾಂತಿಗೆ ಹೋಗುವಾಗ, ಉಸಿರಾಟದ ಹೊತ್ತಿನಲ್ಲಿ ಅವು ಶಬ್ದವನ್ನು ಉತ್ಪತ್ತಿಪಡಿಸುತ್ತವೆ.
ಈ ಶಬ್ದವನ್ನು ಕಡಿಮೆ ಮಾಡುವ ಪ್ರಕ್ರಿಯೆಗಳಲ್ಲಿ ಪ್ರಮುಖವಾದದ್ದು ನಿಮ್ಮ ಕೊಠಡಿಯಲ್ಲಿ ತೇವಾಂಶವನ್ನು (humidity) ಉಳಿಸುವುದು. ಬಹುಪಾಲು ಜನರ ಹಳೆಯ ಅಭ್ಯಾಸ ಎಂದರೆ ಫ್ಯಾನ್ ಅಥವಾ A/C ಗಾಳಿಯಲ್ಲಿ ಮಲಗುವುದು. ಆದರೆ ಈ ಗಾಳಿಯಲ್ಲಿ ತೇವಾಂಶ ಕೊರತೆ ಇರಬಹುದು. ಇದರಿಂದ ಮೂಗಿನ ಒಳಗಿನ ನಾಳಗಳು ಒಣಗುತ್ತವೆ, ಉಸಿರಾಟದಲ್ಲಿ ಅಡಚಣೆ ಉಂಟಾಗಿ, ಗೊರಕೆಗೆ ಕಾರಣವಾಗಬಹುದು.
ಮಲಗುವ ಭಂಗಿ:
ಬೆನ್ನಿನ ಮೇಲೆ ಮಲಗುವ ಬದಲು ಬದಿಯಲ್ಲಿ ಮಲಗುವುದು ಗೊರಕೆಯನ್ನು ಕಡಿಮೆ ಮಾಡುತ್ತದೆ.
ತೂಕ ಕಡಿಮೆ ಮಾಡುವುದು:
ಅಧಿಕ ತೂಕವು ಗೊರಕೆಗೆ ಒಂದು ಕಾರಣವಾಗಬಹುದು, ಆದ್ದರಿಂದ ತೂಕವನ್ನು ಕಡಿಮೆ ಮಾಡುವುದರಿಂದ ಗೊರಕೆಯನ್ನು ಕಡಿಮೆ ಮಾಡಬಹುದು.
ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು:
ಧೂಮಪಾನ ಮತ್ತು ಮದ್ಯಪಾನವು ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಇದು ಗೊರಕೆಗೆ ಕಾರಣವಾಗುತ್ತದೆ.
ಮೂಗಿನ ಪಟ್ಟಿಗಳು ಅಥವಾ ಡಿವೈಸ್ ಗಳು:
ಮೂಗಿನ ಪಟ್ಟಿಗಳು ಅಥವಾ ಡಿವೈಸ್ ಗಳನ್ನು ಬಳಸಿ, ನಿಮ್ಮ ಮೂಗಿನ ಹೊಳ್ಳೆಗಳನ್ನು ತೆರೆಯಿರಿ ಮತ್ತು ಗಾಳಿಯ ಹರಿವನ್ನು ಸುಧಾರಿಸಬಹುದು.
ಮಲಗುವ ಮುನ್ನ ನೀರು ಕುಡಿಯುವುದು:
ಗಂಟಲು ಒಣಗುವುದನ್ನು ತಡೆಯಲು ಮಲಗುವ ಮುನ್ನ ಸಾಕಷ್ಟು ನೀರು ಕುಡಿಯಿರಿ.
ದಿಂಬುಗಳನ್ನು ಬಳಸಿ:
ತಲೆದಿಂಬಿನ ಸಹಾಯದಿಂದ ತಲೆಯನ್ನು ಕೊಂಚ ಎತ್ತರದಲ್ಲಿರಿಸಿ ಮಲಗಬಹುದು. ಇದರಿಂದ ನಿದ್ದೆಯಲ್ಲಿ ನಾಲಗೆ ಹಿಂಭಾಗಕ್ಕೆ ಸರಿದು, ಗಾಳಿ ಚಲನೆಯನ್ನು ಅಡ್ಡಿ ಪಡಿಸುತ್ತದೆ. ತಲೆದಿಂಬು ಗೊರಕೆ ಹೊಡೆಯುವುದನ್ನು ನಿಲ್ಲಿಸಲು ಸಹಾಯ ಮಾಡಲಿದೆ.