ಸದಾ ಉಸಿರಾಟದ ತೊಂದರೆಯಿದ್ದರೆ ಅಥವಾ ಈಗಿನ್ನು ಉಸಿರಾಟದ ತೊಂದರೆಗಳು ಆರಂಭವಾಗುತ್ತಿದೆ ಎನಿಸಿದರೆ ತಪ್ಪದೇ ಈ ಪದಾರ್ಥಗಳನ್ನು ಸೇವನೆ ಮಾಡಿ..
ತುಳಸಿಯಲ್ಲಿ ಹಲವಾರು ಆರೋಗ್ಯಕಾರಿ ಗುಣಗಳಿವೆ. ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಸಾಕಷ್ಟು ಗುಣಗಳು ಇದರಲ್ಲಿವೆ. ತುಳಸಿಯು ಉತ್ಕರ್ಷಣ ನಿರೋಧಕ ಹಾಗೂ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
ಮಲಬಾರ್ ನಟ್ ಎಂದು ಕರೆಯಲ್ಪಡುವ ಆಡುಸೋಗೆ ಎಲೆಗಳು ಶ್ವಾಸಕೋಶವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿವೆ. ಆಡುಸೋಗೆ ಎಲೆಗಳು ಕಫವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಕೆಮ್ಮನ್ನು ಸಹ ನಿವಾರಿಸುತ್ತದೆ. ಇದಲ್ಲದೆ, ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್‌ನಲ್ಲಿ ಶುಂಠಿಯು ಉಸಿರಾಟದ ಸೋಂಕುಗಳು ಮತ್ತು ಉಸಿರಾಟದ ಪ್ರದೇಶದ ಉರಿಯೂತ ಕಡಿಮೆ ಮಾಡುವ ಅನೇಕ ಗುಣಗಳನ್ನು ಹೊಂದಿದೆ.
ಅರಿಶಿನದಲ್ಲಿ ಉರಿಯೂತ ನಿವಾರಕ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಕರ್ಕ್ಯುಮಿನ್ ಉಸಿರಾಟದ ಸಮಸ್ಯೆಗಳನ್ನು ಪರಿಹರಿಸಲು ತುಂಬಾ ಉಪಯುಕ್ತವಾಗಿದೆ. ಅರಿಶಿನ ಆಸ್ತಮಾ, ಬ್ರಾಂಕೈಟಿಸ್ ಹಾಗೂ ಶ್ವಾಸನಾಳದ ಉರಿಯೂತದಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ.