ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಟುಂಬಿಕ ಕಲಹಕ್ಕೆ ಬೇಸತ್ತು ಎರಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರಬೆಟ್ಟ ಸಮೀಪದ ಕಾಡುಹೊಲ ಗ್ರಾಮದಲ್ಲಿ ನಡೆದಿದೆ.
ಸುಶೀಲ (30), ಮಕ್ಕಳಾದ ಚಂದ್ರು (8), ದಿವ್ಯ (11) ಮೃತ ದುರ್ದೈವಿಗಳು. ಜಮೀನಿನ ಮಾಲೀಕ ನೀರು ತರಲು ಬಾವಿಯ ಬಳಿ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.