February 25, 2026
Wednesday, February 25, 2026
spot_img

e-nose, e-tounge | ತಿರುಪತಿ ಲಡ್ಡು ಕಲಬೆರಕೆಯಾಗೋ ಟೆನ್ಷನ್‌ ಇಲ್ಲ, ಅದಕ್ಕೂ ಬಂದಿದೆ ಯಂತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿರುಪತಿ ದೇವರ ಪ್ರಸಾದ ಲಡ್ಡುವಿನಲ್ಲಿ ಕಲಬೆರಕೆ ಆಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇ-ಮೂಗು ಹಾಗೂ ಇ-ನಾಲಗೆ ಎನ್ನುವ ಎರಡು ಯಂತ್ರಗಳನನ್ನು ತಿರುಮಲಕ್ಕೆ ತರಲಾಗುತ್ತಿದೆ.

ಹೌದು, ಇ-ಟಂಗ್​ ಮತ್ತು ಇ-ನೋಸ್ ಎಂಬ ಸುಧಾರಿತ ಯಂತ್ರಗಳನ್ನು ಫ್ರಾನ್ಸ್‌ನಿಂದ 3.5 ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ.ಹೆಸರೇ ಸೂಚಿಸುವಂತೆ ಇವು ಮಾನವ ಮೂಗು ಮತ್ತು ನಾಲಿಗೆಯಂತೆ ಕಾರ್ಯನಿರ್ವಹಿಸುವ ಗ್ಯಾಸ್​ ಮತ್ತು ರಾಸಾಯನಿಕ ಸೆನ್ಸಾರ್​ಗಳ ಗುಂಪಾಗಿದೆ.

ಆಹಾರ ಉದ್ಯಮದಲ್ಲಿ ಉತ್ಪನ್ನದ ಗುಣಮಟ್ಟ, ಸ್ಥಿರವಾದ ರುಚಿ ಮತ್ತು ಸುವಾಸನೆ ನಿರ್ಣಾಯಕ. ಏಕೆಂದರೆ ಇವು ಮಾರ್ಕೆಟಿಂಗ್ ತಂತ್ರವನ್ನು ನಿರ್ಧರಿಸುವ ಅಂಶಗಳಾಗಿವೆ. ಇತ್ತೀಚಿನ ಉಪಕರಣಗಳು ಡೈರಿ ಉದ್ಯಮ ಮತ್ತು ಆಹಾರ ವಲಯಗಳು ನಿರ್ದಿಷ್ಟ ಉತ್ಪಾದಕತೆಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ ಈ ಯಂತ್ರಗಳು ಉತ್ಪನ್ನದ ಗುಣಮಟ್ಟ ಮತ್ತು ಗ್ರಾಹಕರ ಆದ್ಯತೆಗಳ ಮೇಲೆ ಹೆಚ್ಚು ಗಮನಹರಿಸುತ್ತವೆ.

ಮನುಷ್ಯರ ಮೂಗು ಹಾಗೂ ನಾಲಗೆಯಂತೆ ಈ ಮಶೀನ್‌ಗಳು ಕಾರ್ಯನಿರ್ವಹಿಸುತ್ತವೆ. ಇವು ವಾಸನೆಯ ಆಧಾರದ ಮೇಲೆ ಘನ, ದ್ರವ, ಅರೆ-ಘನ ಮತ್ತು ಅನಿಲ ಹಂತಗಳಂತಹ ವಿಭಿನ್ನ ಭೌತಿಕ ಸ್ಥಿತಿಗಳಲ್ಲಿ ಆಹಾರದ ಅಸ್ಥಿರ ಘಟಕಗಳನ್ನು ವಿಶ್ಲೇಷಿಸಬಹುದು. ಇದರಿಂದಾಗಿ ಇನ್ಮುಂದೆ ಲಡ್ಡುವಿನಲ್ಲಿ ಯಾವುದೇ ಸಮಸ್ಯೆ ಇರೋದಕ್ಕೆ ಸಾಧ್ಯವೇ ಇಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !