ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸೋಮವಾರ ಒಂದೇ ದಿನ 5.3 ಕೋಟಿ ರೂ. ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಭಕ್ತರ ಸಂಖ್ಯೆ ಸಾಧಾರಣವಾಗಿದ್ದರೂ ಸಹ ಇದು ಕಳೆದ ಒಂದು ವರ್ಷದಲ್ಲಿ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚು ಕಾಣಿಕೆಯಾಗಿದೆ.
ಸೋಮವಾರ ತಿರುಮಲ ದೇವಸ್ಥಾನದಲ್ಲಿ 78,730 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯ ಜನದಟ್ಟಣೆಯ ಹೊರತಾಗಿಯೂ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಹುಂಡಿಗೆ 5.3 ಕೋಟಿ ರೂ. ಕಾಣಿಕೆ ಹರಿದುಬಂದಿದೆ.
2023ರ ಜನವರಿ 2 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಕಾಣಿಕೆ ಸಂಗ್ರಹವಾಗಿತ್ತು. ಆ ದಿನ ದೇವಾಲಯಕ್ಕೆ 7.68 ಕೋಟಿ ರೂ. ಒಂದೇ ದಿನದಲ್ಲಿ ಹರಿದುಬಂದಿತ್ತು.