ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿಯ ಶ್ರೀ ವೆಂಕಟೇಶ್ವರ ಮೃಗಾಲಯದಲ್ಲಿ ಹಿರಿಯ ಸಿಂಹ ಮೃತಪಟ್ಟಿದೆ.
ಕೆಲ ದಿನಗಳ ಹಿಂದಷ್ಟೇ ಇದೇ ಮೃಗಾಲಯದಲ್ಲಿ ಅನುರಾಗ್ ಎಂಬ ಗಂಡು ಸಿಂಹ ಮೃತಪಟ್ಟಿತ್ತು. ಇದೀಗ 23 ವರ್ಷದ ಅತ್ಯಂತ ಹಿರಿಯ ಸಿಂಹಿಣಿ ಸೀತಾ ಮೃತಪಟ್ಟಿದೆ.
ವಯೋಸಹಜ ಕಾಯಿಲೆಗಳಿಂದ ಸಿಂಹಿಣಿ ಬಳಲುತ್ತಿದ್ದು, ಕೆಲವು ದಿನಗಳಿಂದ ಆಹಾರ ತ್ಯಜಿಸಿತ್ತು ಎನ್ನಲಾಗಿದೆ.