ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ನಾಯಕಿ, ಸಂಸದೆ ಮಹುವಾ ಮೊಯಿತ್ರಾ ಎರಡು ತಿಂಗಳ ಹಿಂದೆಯಷ್ಟೇ ಒರಿಸ್ಸಾದ ಪಿನಾಕಿಮಿಶ್ರಾರನ್ನು ಜರ್ಮನ್ ನಲ್ಲಿ ವಿವಾಹವಾಗಿದ್ದರು. ಇದೀಗ ದೆಹಲಿಯ ಲಲಿತ್ ಅಶೋಕ್ ಹೋಟೇಲ್ ನಲ್ಲಿ ಮದುವೆಯ ರಿಸೆಪ್ಷನ್ ಮಾಡಿಕೊಂಡಿದ್ದಾರೆ.
ಪಕ್ಷಾತೀತವಾಗಿ ಸಂಸದರು, ನಾಯಕರುಗಳನ್ನು ತಮ್ಮ ಮದುವೆಯ ರಿಸೆಪ್ಷನ್ ಗೆ ಆಹ್ವಾನಿಸಿದ್ದರು. ಮದುವೆ ರಿಸೆಪ್ಷನ್ ನಲ್ಲಿ ಮಹುವಾ ಮೊಯಿತ್ರಾ ಕೆಂಪು ಸೀರೆ, ಚಿನ್ನಾಭರಣ ಧರಿಸಿ ಮಿಂಚಿದ್ದರು. ಇನ್ನೂ ಪತಿ ಪಿನಾಕಿ ಮಿಶ್ರಾ ಬಿಳಿಬಣ್ಣದ ಬಟ್ಟೆ ಧರಿಸಿದ್ದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ದೀಪೇಂದರ್ ಹೂಡಾ, ಶಿವಸೇನೆ ಪಕ್ಷದ ಪ್ರಿಯಾಂಕಾ ಚತುರ್ವೇದಿ, ಟಿಎಂಸಿ ಪಕ್ಷದ ಸಂಸದೆ ಸಾಗರಿಕಾ ಘೋಷ್, ರಚನಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಸಂಸದ ವೀರೇಂದ್ರ ಸಿಂಗ್, ಎನ್‌ಸಿಪಿ ಪಕ್ಷದ ಸಂಸದೆ ಸುಪ್ರಿಯಾ ಸುಳೆ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ವಿವಿಧ ಪಕ್ಷಗಳ ಹತ್ತಾರು ಮಂದಿ ಮಹಿಳಾ ಸಂಸದರು ರೆಸೆಪ್ಷನ್ ನಲ್ಲಿ ಭಾಗವಹಿಸಿ ನೂತನ ದಂಪತಿಗೆ ಶುಭ ಹಾರೈಸಿದ್ದರು.
ಮಹುವಾ ಮೊಯಿತ್ರಾ ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರದಿಂದ 2ನೇ ಭಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿದೇಶದಲ್ಲಿ ಬ್ಯಾಂಕರ್ ಆಗಿದ್ದರು. ಮೌಹಾ ಮೋಯಿತ್ರರ ಮೊದಲ ಮದುವೆ ವಿಚ್ಛೇದನದಲ್ಲಿ ಅಂತ್ಯವಾಗಿದೆ.
ಇನ್ನೂ ಬಿಜೆಡಿ ಪಕ್ಷದಿಂದ ಒರಿಸ್ಸಾದ ಪುರಿ ಲೋಕಸಭಾ ಕ್ಷೇತ್ರದಿಂದ ಪಿನಾಕಿ ಮಿಶ್ರಾ ಲೋಕಸಭೆಗೆ ಆಯ್ಕೆಯಾಗಿದ್ದರು. ಈಗ ಮಾಜಿ ಲೋಕಸಭಾ ಸದಸ್ಯರಾಗಿದ್ದಾರೆ. ವೃತ್ತಿಯಲ್ಲಿ ವಕೀಲರು ಕೂಡ ಹೌದು. ಪಿನಾಕಿ ಮಿಶ್ರಾಗೂ ಈಗಾಗಲೇ ಒಂದು ಮದುವೆಯಾಗಿ ಮಕ್ಕಳಿದ್ದರು. ಈಗ ಪಿನಾಕಿ ಮಿಶ್ರಾ ಜೀವನದಲ್ಲಿ ಎರಡನೇ ಭಾರಿಗೆ ವಿವಾಹವಾಗಿದ್ದಾರೆ.