ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಟಕವಾಗಿದ್ದು, 30,000ಕ್ಕೂ ಅಧಿಕ ಪಂಚಾಯತ್ ಸ್ಥಾನಗಳಲ್ಲಿ ಟಿಎಂಸಿ ಗೆಲುವು ಸಾಧಿಸಿದೆ.
ಚುನಾವಣೆಯಿಂದ ಫಲಿತಾಂಶ ಪ್ರಕಟದವರೆಗೂ ಪಶ್ಚಿಮ ಬಂಗಾಳದಲ್ಲಿ ಒಂದಿಲ್ಲೊಂದು ಗಲಭೆ ಸೃಷ್ಟಿಯಾಗಿದ್ದು, ಅಂತಿಮವಾಗಿ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ 24,000 ಸ್ಥಾನಗಳಿಗೆ ಚುನಾವಣೆ ನಡೆದಿದ್ದುಮ 30,391 ಗ್ರಾಮ ಪಂಚಾಯತ್ ಹಾಗೂ 1,155 ತಾಲೂಕು ಪಂಚಾಯತ್ ಹಾಗೂ 88 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಟಿಎಂಸಿ ಜಯಭೇರಿ ಬಾರಿಸಿದೆ.
ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನ ಘರ್ಷಣೆ ಹಾಗೂ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಮತ ಎಣಿಕೆ ಕೇಂದ್ರದ ಮುಂಭಾಗವೇ ಬಾಂಬ್ ಸ್ಫೋಟಗೊಂಡಿತ್ತು.