ಯುವಕರಿಗೆ ಬುಡಕಟ್ಟು ವೀರರ ಹೋರಾಟ ಪರಿಚಯಿಸಲು‌ ಪಣ…

– ರಾಚಪ್ಪ ಜಂಬಗಿ

ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ನವದೆಹಲಿ ಹಾಗೂ ಅಖಿಲ ಭಾರತೀಯ ವನವಾಸಿ‌ ಕಲ್ಯಾಣ ಆಶ್ರಮದ ಸಹಯೋಗದಲ್ಲಿ ದೇಶಾದ್ಯಂತ 100ಕ್ಕೂ ಅಧಿಕ ವಿಶ್ವವಿದ್ಯಾಲಯಗಳಲ್ಲಿ ಬುಡಕಟ್ಟು ಸಮುದಾಯದ ವೀರರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವನ್ನು ಯುವ ಪೀಳಿಗೆಗೆ ತಿಳಿಸಲು ಮುಂದಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿಯವರ ಅಹಿಂಸೆಯ ಹೋರಾಟದೊಂದಿಗೆ ಗುಡ್ಡಗಾಡುಗಳಲ್ಲಿ ವಾಸವಿರುತ್ತಿದ್ದವರ ಬದುಕು ಹೇಗಿತ್ತು, ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯದ ವೀರತನ, ಶೂರತನ ಇತಿಹಾಸ ಪುಟಗಳಲ್ಲಿ ಮರೆಯಾಗಿದೆ. ಆಂಗ್ಲರ ‌ವಿರುದ್ಧ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ವೀರರು ಹಚ್ಚಿದ ಕಿಚ್ಚು ಅಪಾರವಾಗಿದೆ. ದೇಶದಲ್ಲಿ ಸುಮಾರು 11 ಕೋಟಿ ಜನಸಂಖ್ಯೆಯುಳ್ಳ ಜನಾಂಗ ಬುಡಕಟ್ಟು ಜನಾಂಗವಾಗಿದೆ. ದೇಶದ ವಿವಿಧ ಭಾಗಗಳಾದ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ ಸೇರಿದಂತೆ ಅನೇಕ‌ ಕಡೆಗಳಲ್ಲಿ ಬುಡಕಟ್ಟು ಸಮುದಾಯದ ಸಂತತಿ ಅತೀ ಹೆಚ್ಚು ಕಂಡುಬರುತ್ತದೆ.

ಬಿಹಾರದ ತಿಲಕ ಮಾಂಜಿ ಎಂಬ ಬುಡಕಟ್ಟು ಸಮುದಾಯದ ಯುವಕ 1750ರಲ್ಲಿ ಬುಡಕಟ್ಟು ಜನರ‌ ಮೇಲೆ ಬ್ರಿಟಿಷರ ದಬ್ಬಾಳಿಕೆ ತಾಳಲಾರದೆ ಆಂಗ್ಲ ಅಧಿಕಾರಿಯನ್ನು ಬಿಲ್ಲಿನಿಂದ ಹತ್ಯೆ ಮಾಡಿದ್ದ. ಅಂದಿನಿಂದ ಬ್ರಿಟಿಷರ ವಿರುದ್ಧ ಬುಡಕಟ್ಟು ಸಮುದಾಯ ತೊಡೆ ತಟ್ಟಿ ನಿಂತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿತ್ತು.

ಬುಡಕಟ್ಟು ಸಮುದಾಯವು ರಾಮಾಯಣ,‌ ಮಹಾಭಾರತ ಕಥಾ ರೂಪದಲ್ಲಿ ಪ್ರತಿ ಹಂತದಲ್ಲೂ ವನವಾಸಿಗಳು ಕಂಡುಬರುತ್ತಾರೆ. ಇಷ್ಟಕ್ಕೂ ನೋಡಿದರೆ ರಾಮಾಯಣ ಬರೆದ ವಾಲ್ಮೀಕಿ ಕೂಡ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬುಡಕಟ್ಟು ವೀರರ ಪಾತ್ರವೆನಿತ್ತು ಎಂಬುದರ ಬಗ್ಗೆ ಒಂದು ದಿನದ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಬುಡಕಟ್ಟು ವೀರರ ಬಗ್ಗೆ ‌ಸ್ಥಬ್ಧ ಚಿತ್ರಗಳ ಪ್ರದರ್ಶನ ನಡೆಯಿತು.

ಇದರಲ್ಲಿ ಟ್ರೈಬಲ್ ಹಿರೋಸ್ ಎಂದೆ ಖ್ಯಾತಿ ಪಡೆದಿದ್ದ ಬಿರ್ಸಾ ಮುಂಡಾ, ಭೀಮಾ ನಾಯಕ್, ಕಯಂಗ್ ನಂಗಭಾಹ್, ರಾಮಜೀ ಗೊಂಡ್, ಖಾಜ್ಯಾ ನಾಯಕ್, ತಾಂತೀಯಾ ಭಿಲ್, ಸಂಭುದಾನ ಫೋಗ್ಲೋ, ಪಾ ತೋಗನ್ ಸಂಗ್ಮಾ ಸೇರಿದಂತೆ ಅಸಂಖ್ಯಾತ ಬುಡಕಟ್ಟು ಜನಾಂಗದ ಹೋರಾಟಗಾರರ‌ ಶೌರ್ಯದ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಕೆಲಸ ನಡೆದಿದೆ.

ಕರ್ನಾಟಕದಲ್ಲಿ ಒಟ್ಟು 51 ಪ್ರಕಾರದ ಬುಡಕಟ್ಟು ಸಮುದಾಯಗಳಿವೆ. ಉಡುಪಿಯ ಕೊರಗ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡದ ಜೇನು ಕುರುಬ ಸಮುದಾಯ ಪ್ರಮುಖವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!