ಕಲಬುರಗಿ ಗ್ರಾಮೀಣಕ್ಕೆ ರೇವು ನಾಯಕಗೆ ಕಾಂಗ್ರೆಸ್ ಟಿಕೆಟ್

ಹೊಸ ದಿಗಂತ ವರದಿ, ಕಲಬುರಗಿ:

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲೆಯ ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಮಾಜಿ ಸಚಿವ ದಿ. ಜಿ. ರಾಮಕೃಷ್ಣ ಪುತ್ರ ವಿಜಯಕುಮಾರ್ ರಾಮಕೃಷ್ಣ ಹಾಗೂ ರೇವು ನಾಯಕ ಬೆಳಮಗಿ ಅವರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಹೈಕಮಾಂಡ್ ಬೆಳಮಗಿ ಅವರಿಗೆ ಮಣೆ ಹಾಕಿದೆ.

ಈಗಾಗಲೇ ಅಭ್ಯರ್ಥಿ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್​, ಜಿಲ್ಲೆಯ 9 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದೀಗ ಬಾಕಿ ಇದ ಕಲಬುರಗಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮೂಲಕ ಜಿಲ್ಲೆಯ ಎಲ್ಲಾ ಒಂಬತ್ತು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದಂತಾಗಿದೆ.

ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಅಫಜಲಪೂರ್ : ಎಂ. ವೈ. ಪಾಟೀಲ್
ಆಳಂದ್ : ಬಿ. ಆರ್. ಪಾಟೀಲ್
ಜೇವರ್ಗಿ : ಡಾ. ಅಜಯ ಸಿಂಗ್
ಚಿತ್ತಾಪುರ : ಪ್ರಿಯಾಂಕ್ ಖರ್ಗೆ
ಸೇಡಂ : ಡಾ. ಶರಣಪ್ರಕಾಶ್ ಪಾಟೀಲ್
ಚಿಂಚೋಳಿ : ಸುಭಾಷ್ ರಾಠೋಡ್
ಕಲಬುರಗಿ ಗ್ರಾಮೀಣ : ರೇವುನಾಯಕ್ ಬೆಳಮಗಿ
ಕಲಬುರಗಿ ಉತ್ತರ : ಕನೀಜಾ ಫಾತಿಮಾ
ಕಲಬುರಗಿ ದಕ್ಷಿಣ : ಅಲ್ಲಮಪ್ರಭು ಪಾಟೀಲ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!