ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇಂದು (ಜೂನ್ 16) ಅಂತರಾಷ್ಟ್ರೀಯ ಅಪ್ಪಂದಿರ ದಿನವಾಗಿದ್ದು, ಅವರ ಪುತ್ರ ವಿನೀಶ್ ದರ್ಶನ್ ಅವರಿಗೆ ಶುಭ ಕೋರಿದ್ದಾರೆ. ಐ ಲವ್ ಯೂ ಅಪ್ಪ, ನೀವು ನನ್ನ ಹೀರೋ ಎಂದು ಪೋಸ್ಟ್ ಮಾಡಿದ್ದಾರೆ.
ತಂದೆಯ ದಿನದ ಶುಭಾಶಯಗಳು, ಅಪ್ಪ. ನಾನು ನಿನ್ನನ್ನು ತುಂಬಾ ಮಿಸ್ ಮಾಡ್ಕೊಳ್ತಿದಿನಿ. “ಐ ಲವ್ ಯೂ” ಯಾವಾಗಲೂ ನೀವೇ ನನ್ನ ಹೀರೋ ಎಂದು ವಿನೀಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ತಮ್ಮ ತಂದೆಯೊಂದಿಗೆ ಕೊಲಾಜ್ ಆಗಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.