ಹೊಸದಿಗಂತ ವರದಿ, ವಿಜಯಪುರ:
ಕಾಂಗ್ರೆಸ್ ಸರ್ಕಾರ ಬೀಳಿಸಲು 60 ಶಾಸಕರು ಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ಸರ್ಕಾರ ಬೀಳಿಸಲು ಯತ್ನ ನಡೆದಿದೆ ಎನ್ನುವ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿ, ಅದು ಹಾಗೆಲ್ಲ ಆಗೋದಿಲ್ಲ, ನಾವು 136 ಶಾಸಕರು ಒಟ್ಟಿಗೆ ಇದ್ದೇವೆ. ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತದೆ. ಒಬ್ಬರೇ ಒಬ್ಬರು ಶಾಸಕರು ಕೂಡ ಹೋಗಲ್ಲ. ಸರ್ಕಾರ ಕೆಡುವುದು ಹಗಲು ಕನಸು ಎಂದರು.
ಇನ್ನು ಇದು ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ. ಈ ಸರ್ಕಾರ ಸಂಪೂರ್ಣ 5 ವರ್ಷ ಇರುತ್ತದೆ. ಮತ್ತೆ 5 ವರ್ಷದ ಬಳಿಕ ಅಧಿಕಾರಕ್ಕೆ ಬರುತ್ತೇವೆ ಎಂದರು.