ರಕ್ತ- ಸಿಕ್ತ ಅವತಾರದಲ್ಲಿ ‘ಟೋಬಿ’: ರಾಜ್.ಬಿ.ಶೆಟ್ಟಿ ಲುಕ್ ಹೇಗಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾದ ಹವಾ ಭಾರೀ ಸದ್ದು ಮಾಡಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾ ದಲ್ಲಿ ಮೊದಲ ಲುಕ್ ವೈರಲ್ ಆಗಿದೆ.

ಪೋಸ್ಟರ್‌ನಲ್ಲಿ ರಾಜ್ ಬಿ ಶೆಟ್ಟಿಯವರು ಮೂಗುತಿ ಹಾಕಿಕೊಂಡು, ಕೂದಲು ಹಾಗೂ ಗಡ್ಡಧಾರಿಯ ಭಯಂಕರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌ನ ಹಿಂದೆ ಮಿಸ್ಸಿಂಗ್ ಎಂಬ tagline ಸಹ ಇದೆ.

ಇತ್ತ ಈ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಯಿತು.

ಚಿತ್ರದ ನಾಯಕ ನಟ ಹಾಗೂ ಕಥೆಗಾರ ರಾಜ್ ಬಿ ಶೆಟ್ಟಿ ಮಾತನಾಡಿ, ಸಿನಿಮಾವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯುತ್ತಮವಾಗಿ ನಿರ್ಮಾಣ ಮಾಡಿದ್ದೇವೆ. ತಾಂತ್ರಿಕವಾಗಿ ಅತ್ಯಂತ ಇಷ್ಟವಾದ ಸಿನಿಮಾ ಇದು. ಚಿತ್ರದ ಪೋಸ್ಟರ್‌ಗೆ ಈಗಾಗಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಮ್ಮ ಪ್ರೀತಿ ಧನ್ಯವಾದ. ನನ್ನ ಪಾತ್ರ, ಟೋಬಿ, ಚಿತ್ರದ ಮಧ್ಯದಲ್ಲಿ ಬರುವ ಪಾತ್ರ ಎಂದು ಹೇಳಿದರು.

ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ, ಈ ಸಿನಿಮಾ, ತಾಂತ್ರಿಕವಾಗಿ ಅತ್ಯದ್ಭುತವಾಗಿ ನಿರ್ಮಾಣಗೊಂಡಿದೆ. ಚಿತ್ರತಂಡಕ್ಕೆ ಹಾಗೂ ರಾಜ್ ಬಿ ಶೆಟ್ಟಿಯವರಿಗೆ ನನ್ನನ್ನು ಆರಿಸಿದ್ದಕ್ಕೆ ಚಿರಋಣಿ ಎಂದು ಚೈತ್ರಾ ಆಚಾರ್ ತಿಳಿಸಿದರು.

ಚಿತ್ರದ ಸಂಭಾಷಣೆ ಬರೆದಿರುವ, ದಯಾನಂದ್ ಮಾತನಾಡಿ ಆಗಸ್ಟ್ 25 ರಂದು ಟೋಬೀ ಎಂಬ ಮನುಷ್ಯ, ಜಗತ್ತನ್ನು ಹೀಗೆ ಕಾಡ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ ಎಂದು ಹೇಳಿದರು.

ಸಮಾರಂಭದಲ್ಲಿ ಚಿತ್ರ ತಂಡದ ಕಲಾವಿದರಾದ ಚೈತ್ರಾ ಆಚಾರ್, ಗೋಪಿಕೃಷ್ಣ ದೇಶಪಾಂಡೆ, ಸಂಯುಕ್ತಾ ಹೊರನಾಡ್, ನಿರ್ದೇಶಕರಾದ ಬೇಸಿಲ್ alchalkal ಜೊತೆಗೆ, ಸಂಗೀತ ನಿರ್ದೇಶಕರಾದ ಮಿ ಮುಕುಂದನ್ ಮತ್ತಿತರರು ಉಪ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!