ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಂತೆ ರಾಜಕೀಯ ಕಣಗಳು ರಂಗೇರುತ್ತಿವೆ. ಇಂದು ಸಿಎಂ ಬೊಮ್ಮಾಯಿ ಎರಡು ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ಕರೆದಿದ್ದು, ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇಂದು 1:30 ಕ್ಕೆ ಅಶೋಕ ಹೊಟೇಲ್‌ನಲ್ಲಿ ಒಂದು ಸುದ್ದಿಗೋಷ್ಠಿ ಹಾಗೂ 2:30 ಕ್ಕೆ ಇನ್ನೊಂದು ಸುದ್ದಿಗೋಷ್ಠಿಯನ್ನು ಸಿಎಂ ಕರೆದಿದ್ದಾರೆ. ಇದರಲ್ಲಿ ಒಂದು ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಇಂದು ಬಿಜೆಪಿ ಸೇರುವ ಅನೌನ್ಸ್‌ಮೆಂಟ್ ಮಾಡುತ್ತಾರೆ ಎನ್ನಲಾಗಿದೆ.
ಎರಡನೇ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತನ್ನ ಹಾಡನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಲ್ಲಾ ವಿಷಯಗಳ ಬಗ್ಗೆಯೂ ಗೌಪ್ಯತೆ ಕಾಪಾಡಿಕೊಂಡಿದ್ದು, ಸತ್ಯಾಸತ್ಯತೆ ಪ್ರೆಸ್‌ಮೀಟ್ ನಂತರವೇ ತಿಳಿಯಲಿದೆ.