ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಕೇಸ್ಗೆ ಇವತ್ತು ಜಡ್ಜ್ಮೆಂಟ್ ಡೇ. ಅದರಲ್ಲೂ ಈ ತೀರ್ಪು ಸಿಎಂ ಸಿದ್ದರಾಮಯ್ಯರ ಭವಿಷ್ಯವನ್ನೇ ನಿರ್ಧರಿಸಲಿದೆ. ಬೆಳಗ್ಗೆ 11 ಗಂಟೆಗೆ ಧಾರವಾಡ ಹೈಕೋರ್ಟ್ನಲ್ಲಿ ಮುಡಾ ಕೇಸ್ನ ತೀರ್ಪು ಪ್ರಕಟವಾಗಲಿದ್ದು ರಾಜಕಾರಣಿಗಳು ತೀರ್ಪಿನತ್ತ ದೃಷ್ಟಿ ನೆಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಪಾಲಿಗೆ ಇವತ್ತು ಬಿಗ್ ಡೇ. ಇತಿಹಾಸದಲ್ಲಿ ದಾಖಲಾಗಿ ಹೋಗುವ ದಿನ. ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಆರೋಪ ಪ್ರಕರಣದ ತೀರ್ಪು ಅನ್ನು ಧಾರವಾಡ ಹೈಕೋರ್ಟ್ ಪೀಠದಲ್ಲಿ ಪ್ರಕಟವಾಗಲಿದೆ.
ನ್ಯಾಯಮೂರ್ತಿ ನಾಗಪ್ರಸನ್ನರಿಂದ ತೀರ್ಪು ಪ್ರಕಟ ಆಗಲಿದೆ. ಬೆಳಗ್ಗೆ 11ಕ್ಕೆ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಜನವರಿ 27ರಂದು ಅಂತಿಮ ವಿಚಾರಣೆ ನಡೆದಿತ್ತು. ಇಡೀ ದಿನ ವಾದ- ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು, ತೀರ್ಪು ಕಾಯ್ದಿರಿಸಿದ್ದರು.