July 14, 2026
Tuesday, July 14, 2026
spot_img

ಇಂದು ಜ್ಯೇಷ್ಠ ಅಮಾವಾಸ್ಯೆ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಇಂದು ಜ್ಯೇಷ್ಠ ಅಮವಾಸ್ಯೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಬಾರಿಯ ಅಮಾವಾಸ್ಯೆಯ ಅಪರೂಪದ ಯೋಗವನ್ನು ಹೊತ್ತು ತಂದಿದೆ. ಜ್ಯೇಷ್ಠ ಅಮಾವಾಸ್ಯೆಯು ನಮ್ಮ ಅಗಲಿದ ಪೂರ್ವಜರನ್ನ ಸ್ಮರಿಸಲು ಮತ್ತು ಅವರ ಕೃಪೆಗೆ ಪಾತ್ರರಾಗಲು ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಈ ದಿನ ನದಿ, ಸಮುದ್ರ ಅಥವಾ ಜಲಮೂಲಗಳ ಬಳಿ ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಕುಟುಂಬದಲ್ಲಿರುವ ‘ಪಿತೃ ದೋಷ’ಗಳನ್ನು ನಿವಾರಿಸಿ, ವಂಶಾಭಿವೃದ್ಧಿ, ಧನಲಾಭ ಮತ್ತು ಮನೆಯಲ್ಲಿ ನೆಮ್ಮದಿಯನ್ನು ಕರುಣಿಸುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಈ ಬಾರಿಯ ಜ್ಯೇಷ್ಠ ಅಮಾವಾಸ್ಯೆಯ ಮತ್ತೊಂದು ದೊಡ್ಡ ಜ್ಯೋತಿಷ್ಯ ವಿದ್ಯಮಾನವೆಂದರೆ, ಇದೇ ದಿನ ದೇವಗುರು ಬೃಹಸ್ಪತಿ (ಗುರು ಗ್ರಹ) ಅಸ್ತಮಿಸುತ್ತಾನೆ. ಈ ಸ್ಥಿತಿಯು ಆಗಸ್ಟ್ 12 ರವರೆಗೆ ಇರಲಿದೆ. ಗುರು ಅಸ್ತಮದ ಅವಧಿಯಲ್ಲಿ ಮದುವೆ, ಗೃಹಪ್ರವೇಶದಂತಹ ಯಾವುದೇ ಶುಭ ಮತ್ತು ಮಾಂಗಲಿಕ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಆದರೆ, ಈ ಸಮಯವು ಜಪ, ತಪ, ಮಂತ್ರ, ಧ್ಯಾನ ಮತ್ತು ದಾನ ಧರ್ಮಗಳಂತಹ ಆಧ್ಯಾತ್ಮಿಕ ಕಾರ್ಯಗಳಿಗೆ ಬಂಗಾರದಂತಹ ಅವಕಾಶವಾಗಿದೆ.

ಇಂದು ಏನು ಮಾಡಬೇಕು?
ಬೆಳಗ್ಗೆ ಸ್ನಾನ ಮಾಡುವಾಗ ನೀರಿಗೆ ಗಂಗಾಜಲ ಹಾಕಿ ಮೀಯಬೇಕು. ನಂತರ ಬಡವರಿಗೆ ಅಥವಾ ಅಗತ್ಯ ಇರುವವರಿಗೆ ಅನ್ನ, ಬಟ್ಟೆ, ಕಪ್ಪು ಎಳ್ಳು ದಾನ ಮಾಡಬೇಕು. ಆಂಜನೇಯನ ದೇಗುಲಕ್ಕೆ ತೆರಳಿ ಪೂಜೆ ಮಾಡಿಸಬೇಕು. ಹನುಮಾನ ಚಾಲಿಸ ಪಠಿಸುವುದು ಸೂಕ್ತ.

ಇಂದು ಉಪವಾಸ ಮಾಡುವವರಿಗೆ ಹಾಲು, ಮೊಸರು, ಹಣ್ಣು, ಸಾಬುದಾನ ಭಕ್ಷ್ಯ ಸೇವನೆ ಮಾಡಬಹುದು. ಉಪವಾಸ ಇಲ್ಲದವರು ಹೆಸರುಕಾಳು, ತರಕಾರಿ ಸಾರು, ರೊಟ್ಟಿ, ಅನ್ನ ಸೇವಿಸಬಹುದು. ಮಾಂಸಾಹಾರ, ಮೊಟ್ಟೆ, ಮದ್ಯಪಾನ ಸೇವನೆ ಮಾಡುವುದು ಸೂಕ್ತವಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !