June 24, 2026
Wednesday, June 24, 2026
spot_img

ಇಂದು ದ್ವಿಜಪ್ರಿಯ ಸಂಕಷ್ಟಿ: ಪೂಜಾ ವಿಧಾನ, ಶುಭ ಮಹೂರ್ತ ಹೀಗಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಹರಣ ಚತುರ್ಥಿಯನ್ನು ಆಚರಿಸಲಾಗುತ್ತದೆ.

ಗಣೇಶನನ್ನು ಆರಾಧಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಇಂದು ಉಪವಾಸ, ಪೂಜೆಯ ಮೂಲಕ ಗಣೇಶನ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ.

ಈ ದಿನ ಬೆಳಗ್ಗೆ ಸ್ನಾನಾದಿ ಕ್ರಮಗಳ ನಂತರ, ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ. ಹಳದಿ ಚೆಂಡು ಹೂವು, ಐದು ಹಸಿರು ದುರ್ವಾ, ವೀಳ್ಯದೆಲೆ, ಹಣ್ಣು ಮತ್ತು ಮೋದಕಗಳನ್ನು ಅರ್ಪಿಸಿ ಪೂಜೆ ನೆರವೇರಿಸಿ. ನಿಮ್ಮ ಮನಸ್ಸಿನ ಆಸೆ ಅಥವಾ ನಿರ್ದಿಷ್ಟ ಗುರಿಯನ್ನು ಸಂಕಲ್ಪಿಸಿಕೊಂಡು ಗಣೇಶನನ್ನು ಪೂಜಿಸಿದರೆ, ಅದರಲ್ಲಿ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ. ಸಾಧ್ಯವಾದರೆ ಆನೆಗೆ ಹಸಿರು ಮೇವು ಅಥವಾ ಕಬ್ಬು ತಿನ್ನಿಸುವುದೂ ಶುಭಕರ

ದಿನಾಂಕ: 2026ರ ಫೆಬ್ರವರಿ 5, ಗುರುವಾರ
ಸಂಕಷ್ಟ ಚತುರ್ಥಿ ಸಮಯ: ಬೆಳಗ್ಗೆ 5:22 ರಿಂದ ಮಧ್ಯಾಹ್ನ 1:57
ಬ್ರಹ್ಮ ಮುಹೂರ್ತ: ಬೆಳಗ್ಗೆ 5:22 ರಿಂದ 6:15
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13 ರಿಂದ 12:57
ಚಂದ್ರೋದಯ: ರಾತ್ರಿ 9:35 (ಸ್ಥಳಾನುಸಾರ ಬದಲಾವಣೆ ಸಾಧ್ಯ)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !