ಇಂದು ಎಲ್ಲರ ಫೇವರಿಟ್ ದಿನ! ಯಾವುದು ಅಂತೀರಾ? ಅದೇ ‘World Chocolate Day’

ಸಿಹಿಯಾದರೂ ಆರೋಗ್ಯಕಾರಿ ಎನ್ನಿಸಿಕೊಳ್ಳುವ ವಿಶಿಷ್ಟ ಆಹಾರವೊಂದಿದೆ ಅದುವೇ ಚಾಕೊಲೇಟ್. ಮಕ್ಕಳಷ್ಟೇ ಅಲ್ಲ, ವಯಸ್ಕರು ಸಹ ಇದರ ರುಚಿಗೆ ಮೋಹಿತರಾಗುತ್ತಾರೆ. ವಿಶೇಷವಾಗಿ ಡಾರ್ಕ್ ಚಾಕೊಲೇಟ್‌ ಹಲವು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತಿರುವ ಹಿನ್ನೆಲೆಯಲ್ಲಿ, ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಸಿಹಿ-ಖುಷಿಯ ಸಂಕೇತವಾಗಿರುವ ಈ ದಿನವನ್ನು ಆಚರಿಸುವ ಹಿನ್ನೆಲೆ ಹಾಗೂ ಇದರ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಇತಿಹಾಸ:
ಚಾಕೊಲೇಟ್‌ ಮೊದಲ ಬಾರಿಗೆ ಜುಲೈ 7, 1550ರಂದು ಯುರೋಪಿನಲ್ಲಿ ಪರಿಚಯಗೊಂಡಿತು ಎಂದು ನಂಬಲಾಗುತ್ತದೆ. ಈ ಮಹತ್ವಪೂರ್ಣ ದಿನದ ನೆನೆಪಿಗಾಗಿ 2009ರಲ್ಲಿ ವಿಶ್ವ ಚಾಕೊಲೇಟ್ ದಿನ ಆಚರಣೆಗೆ ಶುಭಾರಂಭವಾಯಿತು. ಆಗಿನಿಂದ ಪ್ರತಿವರ್ಷ ಜುಲೈ 7 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ಚಾಕೊಲೇಟ್‌ ಎಂದರೆ ನಗು, ಖುಷಿ, ಉತ್ಸಾಹ. ಜನರು ಪರಸ್ಪರ ಚಾಕೊಲೇಟ್ ನೀಡುವ ಮೂಲಕ ಆತ್ಮೀಯತೆ ಹಾಗೂ ಸ್ನೇಹದ ಬಾಂಧವ್ಯವನ್ನು ಬಲಪಡಿಸುತ್ತಾರೆ. ಆದರೆ ಇದರ ಪಕ್ಕದಲ್ಲಿ ಬಹುಮಟ್ಟಿಗೆ ಆರೋಗ್ಯ ಲಾಭಗಳಿರುವುದೂ ಗಮನಾರ್ಹ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಉತ್ಕೃಷ್ಟ ಆಂಟಿ-ಆಕ್ಸಿಡೆಂಟ್ ಗಳಿಂದ ಹೃದಯ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಚಾಕೊಲೇಟ್ ಸೇವನೆಯ ಪ್ರಮುಖ ಪ್ರಯೋಜನಗಳು

ಹೃದಯ ಆರೋಗ್ಯವನ್ನು ಉತ್ತೇಜಿಸುತ್ತದೆ
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನೆರವಾಗುತ್ತದೆ
ಒತ್ತಡ ನಿವಾರಣೆಗೆ ಸಹಾಯಕ
ಮನಸ್ಥಿತಿಯನ್ನು ಸುಧಾರಿಸಲು ಪ್ರೇರಣೆ ನೀಡುತ್ತದೆ
ದೈನಂದಿನ ಚಟುವಟಿಕೆಗೆ ಚುರುಕಾಗಿರಲು ಸಹಕಾರ
ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ
ಕೆಲವೊಮ್ಮೆ ತೂಕ ಕಡಿಮೆಗೆ ಸಹಕಾರಿಯಾಗಬಹುದು

ಚಾಕೊಲೇಟ್ ಎಲ್ಲರಿಗೂ ಸೂಕ್ತವಲ್ಲ. ಮಧುಮೇಹ ಇರುವವರು, ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸುತ್ತಿರುವವರು, ಮೈಗ್ರೇನ್‌ನಿಂದ ಬಳಲುವವರು ಹಾಗೂ ಮೂತ್ರಪಿಂಡದ ಕಲ್ಲು ಸಮಸ್ಯೆ ಇರುವವರು ಚಾಕೊಲೇಟ್ ಸೇವನೆಯಿಂದ ದೂರವಿರುವುದು ಉತ್ತಮ. ಇದಲ್ಲದೆ ನಾಯಿಗಳು ಹಾಗೂ ಬೆಕ್ಕುಗಳಿಗೆ ಚಾಕೊಲೇಟ್ ನೀಡಬಾರದು, ಇದು ಪ್ರಾಣಹಾನಿಗೂ ಕಾರಣವಾಗಬಹುದು.

ವಿಶ್ವ ಚಾಕೊಲೇಟ್ ದಿನದ ಉದ್ದೇಶ ಸಿಹಿಯಾದ ನೆಮ್ಮದಿಯ ಸಂಭ್ರಮವಲ್ಲ, ಆದರೆ ಈ ಆಹಾರದ ಆರೋಗ್ಯದ ಅಂಶಗಳ ಬಗ್ಗೆ ಜನರಿಗಾಗಿ ಜಾಗೃತಿ ಮೂಡಿಸುವುದೂ ಹೌದು. ಸಿಹಿಯಲ್ಲಿ ಆರೋಗ್ಯವಿರಲಿ ಎಂಬ ಆಶಯದೊಂದಿಗೆ ಈ ದಿನವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!