ಶತ್ರುಗಳೂ ಗೌರವಿಸಿದ ಕೊಡಗಿನ ವೀರ, ಭಾರತೀಯ ಸೇನೆಯ ಮೊದಲ ದಂಡನಾಯಕ ಫಿ. ಮಾ. ಕೆ.ಎಂ ಕಾರಿಯಪ್ಪ ಜನ್ಮದಿನ ಇಂದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು, ಭಾರತ ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಅವರ 120 ನೇ ಜನ್ಮದಿನ.

ಜನರಲ್‌ ಕಾರಿಯಪ್ಪ ಅವರನ್ನು ಇಂದಿಗೂ ಅವರ ದೇಶಭಕ್ತಿ ಮತ್ತು ಹುಮ್ಮಸ್ಸಿಗಾಗಿ ಸ್ಮರಿಸಲಾಗುತ್ತದೆ. 1922ರಲ್ಲಿ ಶಾಶ್ವತ ಸೇನಾ ನೇಮಕಾತಿ ಗಳಿಸಿದ ಬಳಿಕ ಅವರು ಲೆಫ್ಟಿನೆಂಟ್ ಪದವಿ ಗಳಿಸಿದರು. ಕಾಲಕ್ರಮೇಣ ಅವರು ಫೀಲ್ಡ್ ಮಾರ್ಷಲ್ ಎಂಬ ಶಾಶ್ವತ ಫೈವ್ ಸ್ಟಾರ್ ಹುದ್ದೆಗೆ ಭಾಜನರಾದರು.ಕರ್ನಾಟಕದ ಕೊಡಗಿನ ಶನಿವಾರಸಂತೆಯಲ್ಲಿ ಜನವರಿ 28, 1899ರಂದು ಜನಿಸಿದ ಕಾರಿಯಪ್ಪನವರು ಕೇವಲ ಇಪ್ಪತ್ತು ವರ್ಷ ಪ್ರಾಯದಲ್ಲಿ ಸೇನೆಗೆ ಸೇರ್ಪಡೆಯಾದರು.

ಭಾರತ ಪಾಕಿಸ್ತಾನ ಯುದ್ಧ ಕೊನೆಗೊಂಡ ಬಳಿಕ, ಭಾರತೀಯ ಸೈನಿಕರ ಮನೋಬಲ ಹೆಚ್ಚಿಸುವ ಸಲುವಾಗಿ ಕಾರ್ಯಪ್ಪನವರು ಗಡಿ ಪ್ರದೇಶಗಳಿಗೆ ಭೇಟಿ ನೀಡಿದರು. ಅವರು ಗಡಿ ದಾಟಿ, ‘ನೋ ಮ್ಯಾನ್ಸ್ ಲ್ಯಾಂಡ್’ ಪ್ರವೇಶಿಸಿದರು.

“ಕಾರ್ಯಪ್ಪನವರನ್ನು ನೋಡುತ್ತಿದ್ದ ಹಾಗೇ, ಪಾಕಿಸ್ತಾನಿ ಕಮಾಂಡರ್ ಅವರನ್ನು ಅಲ್ಲಿಯೇ ನಿಲ್ಲುವಂತೆ ಆದೇಶಿಸಿದರು. ಇಲ್ಲವಾದರೆ ಅವರ ಮೇಲೆ ಗುಂಡು ಹಾರಿಸುವುದಾಗಿ ಹೇಳಿದರು. ಅಷ್ಟರಲ್ಲಿ ಭಾರತದ ಸೈನಿಕರು ಯಾರೋ ಜೋರಾಗಿ ಅವರು ಜನರಲ್ ಕೆಎಂ ಕಾರಿಯಪ್ಪ ಎಂದು ಕೂಗಿ ಹೇಳಿದರು. ಅವರ ಹೆಸರು ಕೇಳುತ್ತಿದ್ದ ಹಾಗೆಯೇ ಪಾಕಿಸ್ತಾನಿ ಸೈನಿಕರು ಆಯುಧ ಕೆಳಗಿಳಿಸಿದರು. ಪಾಕಿಸ್ತಾನದ ಅಧಿಕಾರಿಗಳು ಮುಂದೆ ಬಂದು, ಜನರಲ್ ಕಾರಿಯಪ್ಪನವರಿಗೆ ಸೆಲ್ಯೂಟ್ ಹೊಡೆದು, ಗೌರವ ಸಲ್ಲಿಸಿದರು

ಜನರಲ್ ಕಾರಿಯಪ್ಪನವರು 1953ರಲ್ಲಿ ಸೇನೆಯಿಂದ ನಿವೃತ್ತರಾದರು. ಅವರ ನಿವೃತ್ತಿಯ ಬಳಿಕ 1956ರ ತನಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು. 1986ರಲ್ಲಿ ಅವರು ಭಾರತೀಯ ಸೇನೆ ಮತ್ತು ದೇಶಕ್ಕೆ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಕಾರಿಯಪ್ಪನವರಿಗೆ ಫೀಲ್ಡ್ ಮಾರ್ಷಲ್ ಶಾಶ್ವತ ಹುದ್ದೆ ನೀಡಿ ಗೌರವಿಸಿದರು. ಅದೇ ವರ್ಷ ಅವರಿಗೆ ಭಾರತದ ಎರಡನೆಯ ಅತ್ಯುನ್ನತ ಪುರಸ್ಕಾರವಾದ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here