ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಆಷಾಢ ಮಾಸದ ಮೊದಲ ಶುಕ್ರವಾರವಾಗಿದ್ದು, ನಾಡದೇವತೆ ದರುಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡಿ ತಾಯಿ ದರುಶನಕ್ಕೆ ಬೆಳಗ್ಗೆಯಿಂದಲೇ ಜನರು ಆಗಮಿಸಿದ್ದು, ಗಂಟೆಗಟ್ಟಲೆ ಕ್ಯೂನಿಂತು ದರುಶನ ಪಡೆದು ಧನ್ಯರಾಗಿದ್ದಾರೆ.
ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ ನೆರೆವೇರುತ್ತಿದೆ. ಆಷಾಢ ಶುಕ್ರವಾರದ ಕಾರಣ ಬೆಳಗ್ಗೆ 5:30 ಯಿಂದಲೇ ದೇವಿ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರ ದಟ್ಟಣೆಯಿಂದಾಗಿ ಪಾರ್ಕಿಂಗ್ ತುಂಬಿದ್ದು, ರಸ್ತೆಬದಿ ವ್ಯಾಪಾರಿಗಳಿಗೂ ಲಾಭವಾಗಿದೆ.
ಮೈಸೂರು ಜಿಲ್ಲಾಡಳಿತ ಉಚಿತ ಬಸ್ ವ್ಯವಸ್ಥೆ ಮಾಡಿದ್ದು, ಲಲಿತ್ ಮಹಲ್ ಮೈದಾನದಿಂದ ಬಸ್ ಸಿಗಲಿದೆ. ದೇಗುಲದಲ್ಲಿ ಕೆಲಕಾಲ ನೂಕುನುಗ್ಗಲು ನಡೆದಿದ್ದು, ದೇಗುಲದ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.