ಲಾಲ್‌ ಬಾಗ್‌ ಫ್ಲವರ್‌ ಶೋಗೆ ಇವತ್ತೇ ಕೊನೆಯ ದಿನ, ಇಂದೇ ಹೋಗಿ ಬನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ ಶೋ ನೋಡಲು ಇಂದೇ ಕೊನೆಯ ದಿನ. ಇದುವೆರಗೂ ಯಾರ್ಯಾರು ಹೋಗಿಲ್ಲ, ಇಂದೇ ಹೋಗಿ ಕಣ್ತುಂಬಿಕೊಂಡು ಬನ್ನಿ. ಹನ್ನೊಂದು ದಿನಗಳಿಂದ ನಡೆಯುತ್ತಿರುವ ಈ ಫ್ಲವರ್‌ ಶೋಗೆ ಇಂದು ತೆರೆ ಬೀಳಲಿದೆ.

ವಿವಿಧ ಬಗೆಯ ಹೂವುಗಳನ್ನು ಕಂಡು ಸಾರ್ವಜನಿಕರು ಸಂತಸಪಟ್ಟಿದ್ದಾರೆ. ಆಗಸ್ಟ್ 04 ರಂದು ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದರು. ಆಗಸ್ಟ್ 15 ರಂದು ಸಂಜೆ 8ಗಂಟೆಗೆ ಫ್ಲವರ್ ಶೋ ವೀಕ್ಷಣೆಗೆ ತೆರೆಬೀಳಲಿದೆ.

77ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ 214ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದ್ದು, ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬಂದಿದೆ. ವಿಧಾನಸೌಧದ 18 ಅಡಿ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಈ ಬಾರಿ ಜನರ ಗಮನ ಸೆಳೆದಿದೆ.

ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಲಾಲ್​ಬಾಗ್​ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹೋಗಲು ಟಿಕೆಟ್ ದರವನ್ನು 30 ರೂಪಾಯಿಗೆ ಇಳಿಸಲಾಗಿದೆ. ಇಂದು ಕೊನೆಯ ದಿನವಾದ್ದರಿಂದ ಬೆಂಗಳೂರು ಅಷ್ಟೇ ಅಲ್ಲದೆ, ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಜನ ಬರುವ ಸಾಧ್ಯತೆಯಿದೆ. ಇದುವರೆಗೂ 4ಲಕ್ಷಕ್ಕೂ ಹೆಚ್ಚಿನ ಜನ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!