ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್‌ಲೈನ್ ಇಂದು ಮುಗಿಯಲಿದೆ. ರಾಜ್ಯದ ಬಹುತೇಕ ಕಡೆ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗಿದೆ.
ರಾಜ್ಯದಲ್ಲಿ ಎಲ್ಲಾ ಕಡೆ ಕನ್ನಡ ಬೋರ್ಡ್‌ಗಳು ಕಾಣಿಸದ ಕಾರಣ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಅಂತೆಯೇ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಬೋರ್ಡ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ಇಂದು ಕಡೇ ದಿನವಾಗಿದ್ದು,ರಾಜ್ಯದ ಚಿತ್ರಣ ಬಹುತೇಕ ಬದಲಾಗಿದೆ.
ಬೆಂಗಳೂರಿನ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕ ಬದಲಾಗಿದೆ, ಕೆಲವು ಕಡೆ ಮಾತ್ರ ನಾಮಫಲಕ ಬದಲಾಗಿಲ್ಲ. ಒಟ್ಟಾರೆ ಶೇ.60ರಷ್ಟು ಅಂಗಡಿಗಳಲ್ಲಿ ನಾಮಫಲಕವನ್ನು ಕನ್ನಡಕ್ಕೆ ಬದಲಾವಣೆ ಮಾಡಲಾಗಿದೆ.
ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದು, ಇಂದು ರಾತ್ರಿಯೊಳಗೆ ಕನ್ನಡ ನಾಮಫಲಕ ಕಾಣದೇ ಹೋದರೆ ಇಂಗ್ಲಿಷ್ ಫಲಕಗಳನ್ನು ತೆಗೆದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.