ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಸುವರ್ಣ ಸೌಧದಲ್ಲಿ (Suvaran Soudha) ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನಕ್ಕೆ (Belagavi Winter Session) ಇಂದು ತೆರೆ ಬೀಳಲಿದೆ.
ಉತ್ತರ ಕರ್ನಾಟಕದ ಸಮಸ್ಯೆ ಸವಾಲುಗಳ ಬಗ್ಗೆ ಚರ್ಚೆ ಮಾಡಲುಕರೆಯಲಾಗಿದ್ದ ಅಧಿವೇಶನದಲ್ಲಿ ಅಲ್ಪ ಪ್ರಮಾಣ ಚರ್ಚೆಯಾದ್ರೆ, ಹೆಚ್ಚು ಭಾಗ ಗದ್ದಲಕ್ಕೆ ಕಾರಣವಾಗಿದೆ .
ಈ ಬಾರಿಯ ಕಲಾಪದಲ್ಲಿ ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ಆಗಿದ್ದು, ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಂದಿಷ್ಟು ಚರ್ಚೆಯಾಗಿದೆ.
ಆದ್ರೆ ಸುದೀರ್ಘ ಚರ್ಚೆಯಲ್ಲಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಶಾಸಕರಿಂದಲೇ ನಿರುತ್ಸಾಹ ಕಂಡುಬಂತು.
ಇದಾದ ಬಳಿಕ ಸ್ಪೀಕರ್ ಕುರಿತು ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದ ಹೇಳಿಕೆ ಭಾರೀ ಗದ್ದಲವನ್ನೇ ಮಾಡಿತು. ಬಿಜೆಪಿ ಜಮೀರ್ ರಾಜೀನಾಮೆಗೆ ಪಟ್ಟು ಹಿಡಿದಿದೆ. ಬಿಜೆಪಿ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ಮಾಡಿದರು.
ಇಂದು ಕೊನೆಯ ದಿನವಾಗಿದ್ದು, ಯಾವ ರೀತಿ ಸದನ ಕೊನೆಗೊಳ್ಳಲಿದೆ ಕಾದುನೋಡಬೇಕಿದೆ.