ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ವರ್ಷ ಡಿಸೆಂಬರ್ 1 ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಮಾರಣಾಂತಿಕ ಕಾಯಿಲೆ ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಜಾಥಾ ಹೋಗುವ ಮೂಲಕ, ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಏಡ್ಸ್ ಎಂದರೇನು? ಏಡ್ಸ್ ಬಾರದಂತೆ ತಡೆಯುವುದು ಹೇಗೆ? ಏಡ್ಸ್ ಲಕ್ಷಣಗಳೇನು ಇಲ್ಲಿದೆ ಮಾಹಿತಿ..
ಏಡ್ಸ್ ಎಂದರೇನು?
ಇದು ಹ್ಯೂಮನ್ ಇಮ್ಯುನೋ ಡಿಫಿಷಿಯನ್ಸಿ ವೈರಸ್, ಈ ವೈರಸ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲದೆ ದೇಹದ ಮೇಲೆ ದಾಳಿ ನಡೆಸಿ ಸಾಕಷ್ಟು ಸೋಂಕುಗಳನ್ನು ತಂದೊಡ್ಡುತ್ತದೆ. ಸೋಂಕುಗಳು ಹಾಗೂ ಕ್ಯಾನ್ಸರ್ ಅಪಾಯ ಹೆಚ್ಚುಮಾಡುತ್ತದೆ. ಒಮ್ಮೆ ಏಡ್ಸ್ ಬಂದರೆ ಇಡೀ ಜೀವನ ನಿಮ್ಮ ದೇಹ ಹೋರಾಡುತ್ತಲೇ ಇರಬೇಕಾಗುತ್ತದೆ. ಮನುಷ್ಯನನ್ನು ಸೋಂಕುಗಳಿಂದ ರಕ್ಷಿಸುವ ಬಿಳಿ ರಕ್ತ ಕಣಗಳೇ ಇದರ ಟಾರ್ಗೆಟ್.
ಲಕ್ಷಣಗಳೇನು?
- ಇದ್ದಕ್ಕಿದ್ದಂತೆಯೇ ತೂಕ ಇಳಿಕೆಯಾಗುವುದು
- ರಾತ್ರಿ ವೇಳೆ ಹೆಚ್ಚು ಬೆವರುವುದು
- ಏನೂ ಮಾಡದೆಯೂ ಸುಸ್ತು ಎನಿಸುವುದು
- ಲಿಂಪ್ ಗ್ಲಾಂಡ್ಸ್, ಕಂಕುಳ ಸಂದ ಅಥವಾ ಕುತ್ತಿಗೆಯಲ್ಲಿ ಊತ ಕಾಣಿಸುವುದು
- ವಾರಕ್ಕೂ ಹೆಚ್ಚು ಸಮಯ ಬೇಧಿ
- ಬಾಯಿ, ಜನನಾಂಗಗಳಲ್ಲಿ ಗುಳ್ಳೆ
- ನ್ಯುಮೋನಿಯಾ
- ತಲೆನೋವು, ಜ್ವರ, ಮೈಕೈನೋವು
ಏಡ್ಸ್ ಬಾರದಂತೆ ತಡೆಗಟ್ಟುವುದು ಹೇಗೆ?
- ಅಸುರಕ್ಷಿತ ಲೈಂಗಿಕತೆಯಿಂದ ದೂರ ಇರಿ, ಲೈಂಗಿಕ ಕ್ರಿಯೆ ವೇಳೆ ಪ್ರೊಟೆಕ್ಷನ್ ಕಡ್ಡಾಯ.
- ಸರಿಯಾದ ರೀತಿಯಲ್ಲಿ ಕಾಂಡೋಮ್ ಬಳಕೆ ಬಗ್ಗೆ ತಿಳಿದುಕೊಳ್ಳಿ, ಪ್ರತಿ ಬಾರಿಯೂ ಉಪಯೋಗಿಸಿ.
- ಹೆಚ್ಚು ಜನರ ಜೊತೆ ಲೈಂಗಿಕ ಸಂಬಂಧ ಹೊಂದುವುದರಿಂದ ಏಡ್ಸ್ ರಿಸ್ಕ್ ಹೆಚ್ಚಾಗುತ್ತದೆ ನೆನಪಿರಲಿ.
- ಆಗಾಗ ಸೆಕ್ಸುಯಲಿ ಟ್ರಾನ್ಸ್‌ಮಿಟೆಡ್ ಡಿಸೀಸಸ್ ಪರೀಕ್ಷೆ ಮಾಡಿಸಿ.
- ನೀಡಲ್‌ಗಳನ್ನು ಶೇರ್ ಮಾಡಬೇಡಿ
ಎಚ್‌ಐವಿ ಅಪಾಯ ಯಾರಿಗೆ ಹೆಚ್ಚು?
- ಎಚ್‌ಐವಿ ಪಾಸಿಟಿವ್ ಸಂಗಾತಿ ಇರುವವರಿಗೆ
- ಎಚ್‌ಐವಿ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವವರಿಗೆ
- ಲೈಂಗಿಕ ಶಕ್ತಿ ಹೆಚ್ಚಿಸಲು ಔಷಧ ಬಳಕೆ, ಡ್ರಗ್ಸ್, ಚುಚ್ಚುಮದ್ದು ಬಳಕೆ ಮಾಡುವವರಿಗೆ
- ಅಪರಿಚಿತ ವ್ಯಕ್ತಿಯೊಂದಿಗೆ ಸೆಕ್ಸ್, ಲೈಂಗಿಕ ಆಟಿಕೆಗಳನ್ನು ಹಂಚಿಕೊಳ್ಳುವುದರಿಂದ
- ಎಚ್‌ಐವಿ ಅಥವಾ ಹೆಪಾಟೈಟಿಸ್ ಇರುವ ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ
ಒಂಬತ್ತನೇ ಸ್ಥಾನದಲ್ಲಿ ಕರ್ನಾಟಕ
ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್ ಸೋಂಕಿತ ಸಂಖ್ಯೆ ಶೇ. ೦.೨೯ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಏಡ್ಸ್‌ನಿಂದ ಬಳಲುತ್ತಿರುವವರ ಪಟ್ಟಿಯಲ್ಲಿ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದೆ.