ಇಂದು ವಿಶ್ವ ರಕ್ತದಾನಿಗಳ ದಿನ: ಇದರ ಮಹತ್ವ ನೀವೂ ತಿಳಿದುಕೊಳ್ಳಿ!

ನಿಮಗೆ ಗೊತ್ತಾ, ವಿಶ್ವ ರಕ್ತದಾನಿಗಳ ದಿನ ಅಂದ್ರೇನು ಅಂತ? ನಾವು ಹೇಳ್ತಿವಿ ಕೇಳಿ, ಇದು ಜೂನ್ 14ರಂದು ಆಚರಿಸೋ ಒಂದು ವಿಶೇಷ ದಿನ. ಈ ದಿನದಲ್ಲಿ ನಾವು ನಮ್ಮ ರಕ್ತವನ್ನು ದಾನ ಮಾಡುವುದರ ಮೂಲಕ ಇತರರ ಪ್ರಾಣ ಉಳಿಸಬಹುದು ಎಂದು ಅರಿತುಕೊಳ್ಳೋ ದಿನ.

ವಿಶ್ವ ರಕ್ತದಾನಿಗಳ ದಿನ ಯಾಕೆ ಜೂನ್ 14ರಂದು ಆಚರಿಸುತ್ತಾರೆ ಗೊತ್ತಾ? ಕಾರ್ಲ್ ಲ್ಯಾಂಡ್ಸ್ಟೈನರ್ ಅನ್ನೋ ವಿಜ್ಞಾನಿ ರಕ್ತದ ಗುಂಪುಗಳನ್ನು (Blood Groups) ಕಂಡುಹಿಡಿದಿದ್ರು. ಅವರ ಜನ್ಮದಿನವೇ ಜೂನ್ 14. ಅವರ ಸಾಧನೆಗೂ ಗೌರವ, ಜೊತೆಗೆ ನಮ್ಮೆಲ್ಲರೊಳಗೂ ರಕ್ತದಾನವೇ ಮಾನವೀಯತೆಯನ್ನು ನೆನಪಿಸೋಕೆ ಈ ದಿನ ಆಚರಿಸುತ್ತೇವೆ.

ಎಲ್ಲೋ ಆಸ್ಪತ್ರೆಗಳಲ್ಲಿ, ಅಪಘಾತಗಳಲ್ಲಿ, ಶಸ್ತ್ರಚಿಕಿತ್ಸೆಗಳಲ್ಲಿ ರಕ್ತದ ಅವಶ್ಯಕತೆ ಇರುತ್ತೆ. ಆದ್ರೆ, ಎಲ್ಲರಿಗೂ ರಕ್ತ ಸಿಗೋದಿಲ್ಲ. ನೀವು ನಾವು ಆರೋಗ್ಯವಾಗಿದ್ದರೆ, ರಕ್ತದಾನ ಮಾಡೋದು ನಮ್ಮ ಕರ್ತವ್ಯ. ರಕ್ತದಾನ ಕೇವಲ 10 ನಿಮಿಷದ ಕೆಲಸ. ಆದರೆ ಯಾರಿಗಾದರೂ ಅದು ಇಡೀ ಜೀವನ ಜೀವ ಎರಡು ಹೌದು. ಯಾವುದೇ ಬೆಲೆ ಕಟ್ಟಲಾಗದ ದಾನ ಅಂದ್ರೆ ಅದು ರಕ್ತದಾನ.

ಹೀಗಾಗಿ, ಏನೇ ಆದ್ರೂ — ಒಂದೇ ಒಂದು ಸಲ ನೀವು ರಕ್ತದಾನ ಮಾಡಿ ನೋಡಿ. ಒಂದು ಸಣ್ಣ ಹೆಜ್ಜೆ, ಒಂದು ದೊಡ್ಡ ಬದಲಾವಣೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!