ವಿಶ್ವ ಥೈರಾಯ್ಡ್ ದಿನವು ಪ್ರತಿ ವರ್ಷ ಮೇ 25 ರಂದು ಆಚರಿಸಲಾಗುವ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದ್ದು, ಥೈರಾಯ್ಡ್ ಕಾಯಿಲೆಯ ಹೊರೆ, ರೋಗಿಯ ಅನುಭವ ಮತ್ತು ಥೈರಾಯ್ಡ್ ಕಾಯಿಲೆಗಳ ಅಂತಾರಾಷ್ಟ್ರೀಯ ಅಧ್ಯಯನ, ಚಿಕಿತ್ಸೆಗೆ ಬದ್ಧರಾಗಿರುವ ಎಲ್ಲರನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ.
ಸೆಪ್ಟೆಂಬರ್ 2007 ರಲ್ಲಿ ನಡೆದ ಥೈರಾಯ್ಡ್ ಫೆಡರೇಶನ್ ಇಂಟರ್ನ್ಯಾಷನಲ್ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮೇ 25 ರಂದು “ವಿಶ್ವ ಥೈರಾಯ್ಡ್ ದಿನ” ವನ್ನು ಆಚರಿಸಲು ನಿರ್ಧರಿಸಲಾಯಿತು. ಮೊದಲ ವಿಶ್ವ ಥೈರಾಯ್ಡ್ ದಿನವನ್ನು 2008 ರಲ್ಲಿ ಆಚರಿಸಲಾಯಿತು.
ಥೈರಾಯ್ಡ್ ಫೆಡರೇಶನ್ ಇಂಟರ್ನ್ಯಾಷನಲ್ ಎಂದಿಗೂ ಅಧಿಕೃತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸದಿದ್ದರೂ, ವಿವಿಧ ಸದಸ್ಯ ಸಂಸ್ಥೆಗಳು ವಿಶ್ವಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ಥೈರಾಯ್ಡ್ ಕಾಯಿಲೆಗಳು ಬಹುಶಃ ಜಾಗತಿಕವಾಗಿ ಅತ್ಯಂತ ಪ್ರಚಲಿತ ಅಂತಃಸ್ರಾವಕ ಕಾಯಿಲೆಗಳಲ್ಲಿ ಒಂದಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಥೈರಾಯ್ಡ್ ಕಾಯಿಲೆಯ ಕುರಿತಾದ ವಿವಿಧ ಅಧ್ಯಯನಗಳು ಸುಮಾರು 4.2 ಕೋಟಿ ಭಾರತೀಯರು ಇದರಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಿವೆ.