ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇಂದು ಸಂಭ್ರಮದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾರತದ ವಿವಿಧೆಡೆ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.
ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಇದನ್ನು ಗರುಡ ಪಂಚಮಿ ಮತ್ತು ಜೋಕಾಲಿ ಹಬ್ಬ ಎಂದೂ ಕರೆಯಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದು ಪ್ರಮುಖ.
ಪೂಜೆಯಲ್ಲಿ ಹಾಲು, ತನಿ ಹಾಗೂ ವಿಶೇಷ ಭಕ್ಷ್ಯಗಳನ್ನು ನೀಡಲಾಗುತ್ತದೆ. ನಾಗಬನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯ ಪದ್ಧತಿ. ಪುರಾಣಗಳ ಪ್ರಕಾರ, ಜನಮೇಜಯ ರಾಜನು ನಡೆಸುತ್ತಿದ್ದ ಮಹಾಯಾಗವನ್ನು ಆಸ್ತಿಕ ಮಹರ್ಷಿಗಳ ಮಧ್ಯಸ್ಥಿಕೆಯಿಂದ ನಿಲ್ಲಿಸಿದ ದಿನವೇ ನಾಗಪಂಚಮಿ ಎಂದು ಹೇಳಲಾಗುತ್ತದೆ. ಈ ದಿನ ನವನಾಗಸ್ತೋತ್ರ ಪಠಿಸುವುದು ಅಥವಾ ಓಂ ಅನಂತಾಯ ನಮಃ ಎಂದು ಜಪಿಸುವುದು ಶುಭಕರ ಎಂಬ ನಂಬಿಕೆ.