ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಇಡೀ ಜಗತ್ತೆ ಭಾರತ ನಮ್ಮ ಮಿತ್ರ ರಾಷ್ಟ್ರವೆಂದು ಹೆಮ್ಮೆಯಿಂದ ಹೇಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹೈದರಾಬಾದ್‌ನಲ್ಲಿ ‘ಕನ್ಹ ಶಾಂತಿ ವನಮ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ, ಕೊರೋನಾ ಬಳಿಕ ಭಾರತ ಯಾವ ರೀತಿ ಜಗತ್ತಿಗೆ ಆಸರೆಯಾಗಿದೆ ಅಂದರೆ ಇಂದು ಭಾರತ ನಿಮ್ಮ ಮಿತ್ರ ರಾಷ್ಟ್ರ ಎಂದು ಜಗತ್ತಿಗೆ ಹೇಳುವ ಅಗತ್ಯವಿಲ್ಲ. ಭಾರತ ನಮ್ಮ ಮಿತ್ರ ರಾಷ್ಟ್ರ ಎಂದು ಜಗತ್ತೆ ಹೇಳುತ್ತದೆ ಎಂದರು.
ಹಿಂದೆ ದೇಶವನ್ನು ಗುಲಾಮಗಿರಿಗೆ ಒಳಪಡಿಸಿದವರು ಯೋಗ, ಆಯುರ್ವೇದದಂತಹ ಸಂಪ್ರದಾಯಗಳ ಮೇಲೆ ದಾಳಿ ನಡೆಸಿದ್ದರು.ಇದರಿಂದ ದೇಶ ಅಪಾರ ನಷ್ಟವನ್ನು ಅನುಭವಿಸಿತ್ತು. ಆದ್ರೆ ಇಂದು ಕಾಲ ಬದಲಾಗಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ನಮ್ಮ(ಭಾರತೀಯರ) ನಿರ್ಧಾರಗಳು, ಕೆಲಸಗಳು ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಹೇಳಿದರು.
ಕಳೆದ 10 ವರ್ಷಗಳಿಂದ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಬಲೀಕರಣಗೊಳಿಸಲು ಸರ್ಕಾರ ಎಲ್ಲ ರೀತಿಯಲ್ಲೂ ಶ್ರಮಿಸಿದೆ. ಇಂದು ಭಾರತವನ್ನು ಜ್ಞಾನದ ಕೇಂದ್ರ ಎಂದು ಹೇಳಲಾಗುತ್ತಿದೆ ಎಂದು ಹೇಳಿದರು.