ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಕ್ಬಾಲ್ ಮದುವೆ ವಿಷಯ ಎಲ್ಲೆಡೆ ವೈರಲ್ ಆಗಿದೆ. ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಈ ಬಗ್ಗೆ ಬೋಲ್ಡ್ ರಿಯಾಕ್ಷನ್ ಒಂದನ್ನು ನೀಡಿದ್ದಾರೆ.
ಈಗಿನ ಕಾಲದ ಮಕ್ಕಳು ಮದುವೆ ಆಗೋಕೆ ಪರ್ಮಿಷನ್ ಕೇಳೋದಿಲ್ಲ. ಅವರು ನಿರ್ಧಾರ ಮಾಡಿದ ನಂತರ ನಮಗೆ ವಿಷಯ ಮುಟ್ಟಿಸ್ತಾರಷ್ಟೆ. ಮದುವೆಗೆ ಆಮಂತ್ರಣ ಕೊಟ್ಟರೆ ಹೋಗಿ ಬರ್ತೇನೆ, ಇಲ್ಲವಾದರೆ ಇಲ್ಲ. ಸೋನಾಕ್ಷಿ ಮೆಚ್ಯೂರ್ ಹುಡುಗಿ, ಅವಳ ನಿರ್ಧಾರದ ಬಗ್ಗೆ ನಂಬಿಕೆ ಇದೆ. ಕರೆದರೆ ಮದುವೆಗೆ ಹೋಗಿ ಡ್ಯಾನ್ಸ್ ಮಾಡಿ ಬರ್ತೇನೆ ಎಂದು ಹೇಳಿದ್ದಾರೆ.