ದಿನಭವಿಷ್ಯ: ಆಧ್ಯಾತ್ಮಿಕ ಪ್ರಯಾಣಕ್ಕೆ ಅವಕಾಶ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಮೇಷ.
ನಿಮಗೆ ಹೆಚ್ಚು ಪೂರಕ ದಿನವಲ್ಲ. ಪ್ರತಿಫಲ ಪಡೆದರೂ ಅದು ವಿಳಂಬವಾಗಿ. ಖುಷಿ, ಬೇಸರ ಎರಡನ್ನೂ ಅನುಭವಿಸುವಿರಿ.
ವೃಷಭ
ಖಾಸಗಿಯಾಗಿಯೂ ವೃತ್ತಿಪರವಾಗಿಯೂ ಉನ್ನತಿ ಸಾಧಿಸುವಿರಿ. ಕೌಟುಂಬಿಕ ಸೌಹಾರ್ದ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ಸೂಕ್ತ ಫಲ ದೊರಕಲಿದೆ.
ಮಿಥುನ
ಸಕಾರಾತ್ಮಕ ಚಿಂತನೆಯಿಂದ ಮುಂದೆ ನಡೆಯಿರಿ. ಯಾವುದೇ ಸವಾಲು ಎದುರಿಸಬಲ್ಲಿರಿ.   ಹಣದ ವ್ಯವಹಾರದಲ್ಲಿ ಬಿಗಿತನ ಇರಲಿ.
ಕಟಕ
ವ್ಯವಹಾರದಲ್ಲಿ ಯಶಸ್ಸು. ಆದರೆ ಹೆಚ್ಚು ಶ್ರಮ ಹಾಕಬೇಕಾದೀತು. ಶಾಪಿಂಗ್‌ಗೆ ಹೆಚ್ಚು ಹಣ ಖರ್ಚು ಮಾಡದಿರಿ. ಉಳಿತಾಯವೂ ಮುಖ್ಯ.
ಸಿಂಹ
ಕೌಟುಂಬಿಕ ಸಮಸ್ಯೆ ವಾಗ್ವಾದಕ್ಕೆ ಕಾರಣ ಆದೀತು. ಅದನ್ನು ಸೌಹಾರ್ದದಿಂದ ಬಗೆಹರಿಸಿ. ಆರ್ಥಿಕ ವ್ಯವಹಾರ ಸಾಧಾರಣ.
ಕನ್ಯಾ
ಕೆರಿಯರ್‌ನಲ್ಲಿ ಪ್ರಗತಿ. ವ್ಯವಹಾರ ಸುಗಮ. ಸಮಸ್ಯೆ ತಾನಾಗಿ ನಿವಾರಣೆ. ಅಶಾಂತ ಮನಸ್ಸು ತಹಬಂದಿಗೆ ಬರಲಿದೆ. ಕೌಟುಂಬಿಕ ನೆಮ್ಮದಿ.
ತುಲಾ
ಹಲವಾರು ಸವಾಲು. ಹೊಣೆಗಾರಿಕೆ ಅಽಕ. ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ನಿರಾಳತೆ ಕಾಣುವಿರಿ. ಆಪ್ತರ ಜತೆ ಭಿನ್ನಾಭಿಪ್ರಾಯ ನಿವಾರಿಸಿಕೊಳ್ಳಿ.
ವೃಶ್ಚಿಕ
ನಿಮ್ಮ ನಡೆನುಡಿ ಸ್ಪಷ್ಟವಾಗಿರಲಿ. ಇತರರಿಗೆ ಗೊಂದಲ ಸೃಷ್ಟಿಸದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಅದೃಷ್ಟ ಜತೆಗಿದೆ.
ಧನು
ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿ. ಏಕೆಂದರೆ ಇಂದು ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ. ಕೌಟುಂಬಿಕ ಉದ್ವಿಗ್ನತೆ ಉಂಟಾದೀತು.
ಮಕರ
ನಿಮ್ಮ ಹಠಮಾರಿತನ ಕೌಟುಂಬಿಕ ಶಾಂತಿ ಕೆಡಿಸಬಹುದು. ಹೊಂದಾಣಿಕೆ ಮುಖ್ಯ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶ.
ಕುಂಭ
ಯೋಜಿಸಿ ಕಾರ್ಯ ಎಸಗಿ. ಗೊಂದಲ ಸೃಷ್ಟಿಸಿಕೊಳ್ಳದಿರಿ. ಆರ್ಥಿಕ ಒತ್ತಡ ಹೆಚ್ಚು.ವಿದ್ಯಾರ್ಥಿಗಳಿಂದ ಕಠಿಣ ಪರಿಶ್ರಮ ಅವಶ್ಯ.
ಮೀನ
ಗುರಿ ಸಾಧಿಸಲು ಮಾನಸಿಕ ದೃಢತೆ ಅತಿ ಮುಖ್ಯ. ಸಮಸ್ಯೆಗಳು ತಾನಾಗಿ ಪರಿಹಾರ ಕಾಣುವವು. ತಲೆ ಕೆಡಿಸಿಕೊಳ್ಳದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!