ಮೇಷ
ಕಹಿಸಿಹಿ ನೆನಪುಗಳ ಮಿಶ್ರಣ ಈ ದಿನ. ಹೆಚ್ಚಿದ ಖರ್ಚು ಚಿಂತೆಗೆ ಕಾರಣವಾಗಲಿದೆ. ಆತ್ಮೀಯರ ಜತೆಗಿನ ಭೇಟಿಯಿಂದ ಸಂತೋಷ.
ವೃಷಭ
ಪ್ರಗತಿಗೆ ಬೇಕಾದ ಹಾದಿ ನಿಮ್ಮ ಮುಂದಿದೆ. ಸರಿಯಾದ ರೀತಿಯಲ್ಲಿ ಅದರ ಬಳಕೆ ಮಾಡಿಕೊಳ್ಳಿ. ಅನವಶ್ಯ ದ್ವೇಷ ಭಾವನೆ ಮುಂದುವರಿಸಬೇಡಿ.
ಮಿಥುನ
ಆದಾಯ-ವೆಚ್ಚದ ಮಧ್ಯೆ ಸಮತೋಲನ ಇರಲಿ. ಖರ್ಚು ಹೆಚ್ಚಾಗಿ ತಾಪತ್ರಯ ಪಡುವಿರಿ. ಮಾನಸಿಕ ಶಾಂತಿಗೆ ಹಾತೊರೆಯುವಿರಿ.
ಕಟಕ
ಉದ್ಯೋಗ ಅವಕಾಶ ಹೆಚ್ಚಲಿದೆ. ಕೆರಿಯರ್ ಉನ್ನತಿಗೆ ಆದ್ಯತೆ ಕೊಡಿ. ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಡಬೇಡಿ.
ಸಿಂಹ
ಕೆಲಸದ ಮೇಲೆ ಉತ್ಸಾಹ ಕಳಕೊಳ್ಳುವಿರಿ. ಕೆಲವರ ಮೇಲೆ ಅಸಹನೆ ಹೆಚ್ಚಲಿದೆ. ಶಾಂತ ಮನಸ್ಥಿತಿಯಿಂದ ಯೋಚಿಸಿ ಕಾರ್ಯವೆಸಗಿ.
ಕನ್ಯಾ
ಅಶಾಂತ ಮನಸ್ಥಿತಿ. ಆಪ್ತರ ಜತೆಗೆ ಭಿನ್ನಮತ ಉಂಟಾದೀತು. ನಿಮಗೆ ಸಂಬಂಧಿಸದ ವಿಚಾರದಲ್ಲಿ ತಲೆಕೆಡಿಸಿಕೊಳ್ಳದಿರಿ. ವೆಚ್ಚ ಹೆಚ್ಚಲಿದೆ.
ತುಲಾ
ನೆಗೆಟಿವ್ ಚಿಂತನೆಯ ವ್ಯಕ್ತಿಗಳನ್ನು ದೂರವಿಡಿ. ಅವರ ಪ್ರಭಾವಕ್ಕೆ ಸಿಲುಕದಿರಿ. ಹಳೆಯ ಸ್ನೇಹಿತರ ಭೇಟಿ. ಕೌಟುಂಬಿಕ ಸಮಾಧಾನ.
ವೃಶ್ಚಿಕ
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಸಣ್ಣಪುಟ್ಟ ವಿಷಯಗಳು ಮನಸ್ಸು ಕೆಡಿಸಲು ಅವಕಾಶ ಕಲ್ಪಿಸಬೇಡಿ. ಸಹನೆಯಿಂದ ವರ್ತಿಸಿ.
ಧನು
ಪ್ರಮುಖ ಕೆಲಸಕ್ಕೆ ನೆರವು ಪಡಕೊಳ್ಳಿ. ಏಕಾಂಗಿ ಪ್ರಯತ್ನ ಫಲ ನೀಡದು. ಹೊಟ್ಟೆ ಸಮಸ್ಯೆ ಕಾಡಬಹುದು. ಆಪ್ತರ ಸಂಗದಲ್ಲಿ ಆನಂದ.
ಮಕರ
ನಿಮ್ಮ ವ್ಯವಹಾರ ಉನ್ನತಿಗೆ ಹೊಸ ಚಿಂತನೆ ಅಳವಡಿಸಿ. ಹಳೆಯ ದಾರಿ ಫಲ ನೀಡದು. ಎಲ್ಲರನ್ನು ನಂಬಿ ಕೆಡಬೇಡಿ. ಕೌಟುಂಬಿಕ ಸಹಕಾರ.
ಕುಂಭ
ಹಣಕ್ಕೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರ. ಸೂಕ್ತ ನೆರವು ಲಭ್ಯ. ಸಂಬಂಧದಲ್ಲಿ ಅನುಮಾನಕ್ಕೆ ಆಸ್ಪದ ನೀಡಬೇಡಿ. ವಸ್ತು ಖರೀದಿ, ಧನವ್ಯಯ.
ಮೀನ
ಬಿಡುವಿಲ್ಲದ ದಿನ. ಕೆಲವು ಹೊಣೆಗಾರಿಕೆ ಪೂರೈಸಬೇಕಾದ ಬದ್ಧತೆ. ಆಪ್ತರ ಜತೆ ಪ್ರವಾಸ ಸಂಭವ. ಭಾವನಾತ್ಮಕ ಏರುಪೇರು.



