October 17, 2026
Saturday, October 17, 2026
spot_img

IPL 2026 | ಫಿಲ್‌ ಸಾಲ್ಟ್‌ ಸೂಪರ್ ಮ್ಯಾನ್‌ ಕ್ಯಾಚ್ ಗೆ ಅಭಿಮಾನಿಗಳು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಐಪಿಎಲ್ ಅಬ್ಬರ ಶುರುವಾಗಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೈದರಾಬಾದ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಇದರ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಅಭಿಮಾನಿಗಳನ್ನು ಫಿದಾಗೊಳಿಸಿದೆ.

ಪಂದ್ಯದ 16ನೇ ಓವರ್ ನಲ್ಲಿ ಹೈದರಾಬಾದ್ ನಾಯಕ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚುಸುತ್ತಿದ್ದ ವೇಳೆ ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಸಾಲ್ಟ್, ಡೀಪ್ ಪಾಯಿಂಟ್‌ನಿಂದ ತನ್ನ ಬಲಕ್ಕೆ ವೇಗವಾಗಿ ಓಡಿ ಬಂದು ಒಂದೇ ಕೈಯಲ್ಲಿ ಹಿಡಿದರು. ಸ್ವತಃ ಸಾಲ್ಟ್ ಕ್ಯಾಚ್​ ಕಂಡು ಕಿಶನ್ ಕೂಡ ದಂಗಾದರು.

ಸಾಲ್ಟ್ ವೇಗದ ಓಟಕ್ಕೆ ಆರ್​ಸಿಬಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದು, ಕುಣಿದು ಕುಪ್ಪಳಿಸಿದರು.

Must Read