January14, 2026
Wednesday, January 14, 2026
spot_img

ದಿನಭವಿಷ್ಯ: ದೀರ್ಘಕಾಲೀನ ಹಣಕಾಸು ಬಿಕ್ಕಟ್ಟು ಇಂದು ಪರಿಹಾರ ಆಗುವ ಸಾಧ್ಯತೆಯಿದೆ

ಮೇಷ.
ವೃತ್ತಿಯಲ್ಲಿ ಅಸಹಾಯಕತೆ ನೆರವು ಅಲಭ್ಯ. ಮನೆಯಲ್ಲಿ ಕುಟುಂಬಸ್ಥರ ಅಧಿಕಾರ ಯುತ ವರ್ತನೆಯಿಂದ ರೋಸುವಿರಿ.
ವೃಷಭ
ಉತ್ಸಾಹದ ದಿನ. ನಿಮ್ಮ ‌  ಸ್ಪೂರ್ತಿಯುತ ಕಾರ್ಯ ಯಶಸ್ಸು ತರುವುದು. ಮನೆಯಲ್ಲಿ ಭಿನ್ನಮತ. ಬಂಧು ಆದರಾತಿಥ್ಯ.
ಮಿಥುನ
ದೀರ್ಘಕಾಲೀನ ಹಣಕಾಸು ಬಿಕ್ಕಟ್ಟು ಇಂದು ಪರಿಹಾರ ಆಗುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆಗಳನ್ನು ತಕ್ಷಣವೆ ಪರಿಹರಿಸಿ. ಧನ ಲಾಭ.
ಕಟಕ
ಇತರರ ಸಲಹೆಗಳಿಗೆ ಕಿವಿಗೊಡಿ. ಮುಂದೆ ಒಳಿತಾಗಲಿದೆ. ಎಲ್ಲರನ್ನು ತಕ್ಷಣಕ್ಕೆ ತಿರಸ್ಕರಿಸಬೇಡಿ. ಕೌಟುಂಬಿಕ ಸಹಕಾರ ಲಭಿಸುವುದು.
ಸಿಂಹ
ಎಲ್ಲರೊಂದಿಗೆ ಬೆರೆಯಿರಿ. ಸಮಸ್ಯೆಗೆ ಹೆದರಿ ಕೊರಗುತ್ತಾ ಕೂರದಿರಿ. ಮನಸ್ಸಿನ ತಾಕಲಾಟಕ್ಕೆ ಇತರ ರಿಂದ ಪರಿಹಾರ ಸಿಗಬಹುದು.
ಕನ್ಯಾ
ಸಾಧಾರಣವಾಗಿ ಶಾಂತಚಿತ್ತರಾದ ನೀವು ಇಂದು ಸಹನೆ ಕಳಕೊಳ್ಳುವ ಪ್ರಸಂಗ ಒದಗೀತು. ಇತರರಿಗೆ ನಿಮ್ಮ ವರ್ತನೆ ಅಚ್ಚರಿ ತರಬಹುದು.
ತುಲಾ
ಮಾತಿನಿಂದಲೆ ಎಲ್ಲರನ್ನು ಗೆಲ್ಲುವಿರಿ. ನಿಮ್ಮ ಕೆಲಸದ ವೇಗವೂ ಹೆಚ್ಚುವುದು. ಧನಲಾಭದ ಸುದ್ದಿ ಸಿಗಬಹುದು. ಆರೋಗ್ಯ ಸಮಸ್ಯೆ
ವೃಶ್ಚಿಕ
ಚಿಂತೆ, ಆತಂಕಗಳು ಇಂದು ಕಾಡುವವು. ಸಮಸ್ಯೆಯ ಆಳಕ್ಕಿಳಿದು ಪರಿಹಾರ ಕಂಡುಕೊಳ್ಳಿ. ಗತದಲ್ಲಿ ಸಮಸ್ಯೆ ಅಡಗಿರಬಹುದು.
ಧನು
ದೈನಂದಿನ ಏಕತಾ ನತೆಯ ಬದುಕಿಂದ ಭಿನ್ನತೆ ಪಡೆಯಲು ಬಯಸು ವಿರಿ. ಹೊಸತನಕ್ಕೆ ತುಡಿಯುವಿರಿ. ಪ್ರವಾಸ ಒಳ್ಳೆಯದು.
ಮಕರ
ವೃತ್ತಿಯಲ್ಲಿ ನಿಮ್ಮ ಪ್ರತಿಸ್ಪಽಗಳ ಕುರಿತು ಎಚ್ಚರದಿಂದಿರಬೇಕು. ಅವರಿಂದ ಪ್ರತಿಕೂಲ ಸನ್ನಿವೇಶ ಸೃಷ್ಟಿಯಾದೀತು. ಅದನ್ನು ನಿಭಾಯಿಸಿರಿ.
ಕುಂಭ
ಕಾರ್ಯದಲ್ಲಿ ಸಫಲತೆ ಸಿಗಬೇಕಾದರೆ ಆ ಕುರಿತಾದ ಜ್ಞಾನವನ್ನು ಮೊದಲು ಹೆಚ್ಚಿಸಿಕೊಳ್ಳಿ. ಆತುರದ ನಿರ್ಧಾರ ಬೇಡ. ಸಮಾಲೋಚನೆ ಒಳಿತು.
ಮೀನ
ಅನಿರೀಕ್ಷಿತವಾದುದು ಸಂಭವಿಸಬಹುದು. ನಿಮಗೆ ಪ್ರತಿಕೂಲವಾಗಿದ್ದರೆ ಅದರಿಂದ ದೂರವಿರಿ. ವೃಥಾ ವಿವಾದದಲ್ಲಿ ಸಿಲುಕಲು ಹೋಗದಿರಿ.

Most Read

error: Content is protected !!