Sunday, January 11, 2026

ದಿನಭವಿಷ್ಯ: ಇಂದು ಮುಖ್ಯವಾದ ಜವಾಬ್ದಾರಿಯೊಂದು ನಿಮ್ಮ ಹೆಗಲಿಗೆ ಬೀಳಲಿದೆ

ಮೇಷ
ಪ್ರಮುಖ ಹೊಣೆ ನಿಮ್ಮ ಮೇಲೆ ಬೀಳಲಿದೆ. ಅದನ್ನು ಸರಿಯಾಗಿ ನಿಭಾಯಿಸಿ. ಶಾಪಿಂಗ್‌ಗೆ ಹೆಚ್ಚು ಹಣ ವ್ಯಯ. ಆರೋಗ್ಯ ಸಮಸ್ಯೆ.          
ವೃಷಭ
ಅಹಿತಕರ ಪ್ರಸಂಗ. ವಿಶ್ವಾಸ ಕುಂಠಿತ. ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿ. ಯಶ ಸಿಗಲಿದೆ. ಕೌಟುಂಬಿಕ ಸಮ್ಮಿಲನ. ಹೆಚ್ಚು ಖರ್ಚು.
ಮಿಥುನ
 ಮನೆಯಲ್ಲಿ ಉತ್ಸಾಹದ ಸನ್ನಿವೇಶ.  ಲೋಪ ಉಂಟಾದರೂ ಸಂತೋಷಕ್ಕೆ ಭಂಗ ಬರದು. ಕುಟುಂಬಸ್ಥರ ಉತ್ತಮ ಸಹಕಾರ.  
ಕಟಕ
ಸಣ್ಣಪುಟ್ಟ ಸಂಘರ್ಷ ತಪ್ಪಿಸಿ. ಮನಶ್ಯಾಂತಿ ಕಾಪಾಡಲು ಆದ್ಯತೆ ಕೊಡಿ. ಕೆಲವರ ಒತ್ತಡ ನಿಭಾಯಿಸಲು ಕಷ್ಟ ಪಡುವಂತಾದೀತು.    
ಸಿಂಹ
ಕೆಲಸದ ಒತ್ತಡ. ಮಧ್ಯಾಹ್ನದ ವೇಳೆಗೆ ಎಲ್ಲ ಸುರಳೀತ. ವಾಗ್ವಾದಕ್ಕೆ ಆಸ್ಪದ ಕೊಡಬೇಡಿ. ಪ್ರೀತಿಯಲ್ಲಿ ಯಶ. ಖರ್ಚು ನಿಯಂತ್ರಿಸಿ.    
ಕನ್ಯಾ
ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವಿರಿ. ಆಸಕ್ತ ವ್ಯಕ್ತಿಯ ಭೇಟಿ ಸಂಭವ. ಸ್ನೇಹ ದೀರ್ಘ ಬೆಳೆದೀತು. ಕೌಟುಂಬಿಕ ವಾಗ್ವಾದಕ್ಕೆ ಆಸ್ಪದ ನೀಡದಿರಿ.  
ತುಲಾ
ವೃತ್ತಿಯಲ್ಲಿ ಶುಭ ಬೆಳವಣಿಗೆ. ಆಪ್ತರಿಂದ ಅಚ್ಚರಿಯ ಕೊಡುಗೆ ದೊರಕೀತು. ಕೌಟುಂಬಿಕ ಭಿನ್ನಮತ ಪರಿಹಾರ, ಸಮಾಧಾನಕರ ಪರಿಸ್ಥಿತಿ.
ವೃಶ್ಚಿಕ
ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ತಪ್ಪರ್ಥ ಮೂಡದಿರಲಿ. ಹಣದ ಸಮಸ್ಯೆ ಪರಿಹಾರ. ಕ್ಲಿಷ್ಟ ವಿಷಯದಲ್ಲಿ ಕೌಟುಂಬಿಕ ಬೆಂಬಲ.
ಧನು
 ಸಂಗಾತಿ ಜತೆ ಭಿನ್ನಮತ ಉಲ್ಭಣಕ್ಕೆ ಹೋಗದಂತೆ ನೋಡಿ. ಹೊಂದಾಣಿಕೆ ಮುಖ್ಯ. ನಿಮ್ಮದೇ ನಿಲುವಿಗೆ ಹಠ ಹಿಡಿಯಬೇಡಿ.  
ಮಕರ
 ಕಷ್ಟಕರ ಪರಿಸ್ಥಿತಿ ಯನ್ನು ವಿಶ್ವಾಸದಿಂದ ಎದುರಿಸುವಿರಿ. ಕೌಟುಂಬಿಕ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಸಮಸ್ಯೆ ಪರಿಹಾರ.
ಕುಂಭ
ನಿಮ್ಮ ಮನಶ್ಯಾಂತಿ ಹಾಳು ಮಾಡಲು ಕೆಲವರ ಯತ್ನ. ವದಂತಿಗೆ ಕಿವಿಗೊಡಬೇಡಿ. ಆಪ್ತರ ವಿಶ್ವಾಸ ಕಳಕೊಳ್ಳಬೇಡಿ. ಹಣದ ಸಮಸ್ಯೆ ನಿವಾರಣೆ.      
 ಮೀನ
ಕೆಲಸದಲ್ಲಿ ಹೆಚ್ಚು ಬದ್ಧತೆ ತೋರುವಿರಿ. ಜಡತ್ವ ಬಿಡುವಿರಿ. ಹರಿತ ವಸ್ತುವಿನಿಂದ ಗಾಯವಾದೀತು, ಎಚ್ಚರದಿಂದ ನಿರ್ವಹಿಸಿ. 

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!