ಶುಕ್ರವಾರ, 14 ಜನವರಿ 2022,
ಮೇಷ
ನಿಮ್ಮ ವಸ್ತುವಿನ ಬಗ್ಗೆ ಅತಿಯಾದ ಮೋಹ. ಪೊಸೆಸಿವ್‌ನೆಸ್ ಹೆಚ್ಚು. ‘ನಿಮ್ಮವರ’ ಕುರಿತಂತೆ ಇತರರು ಮಾತನಾಡುವುದನ್ನು ಬಯಸುವುದಿಲ್ಲ.
ವೃಷಭ
ಯಾವುದೋ ವಿಷಯ ಅಥವಾ ವ್ಯಕ್ತಿಗೆ ಸಂಬಂಸಿ ವಿವಾದ ಏರ್ಪಡಬಹುದು. ವಾಗ್ವಾದ ನಡೆದೀತು. ಮನೆಯಲ್ಲಿ ಅತೃಪ್ತ ಬೆಳವಣಿಗೆ.
ಮಿಥುನ
ನಿಮಗಿಂದು ಫಲಪ್ರದ ದಿನವಲ್ಲ. ಆಪ್ತರ ಜತೆಗೆ ಬಹಳಷ್ಟು ಸಮಯ ಕಳೆದರೂ ಅಸಮಾಧಾನ, ಅಸಂತೃಪ್ತಿ ಉಳಿಯು ತ್ತದೆ. ಪುಟ್ಟ ವಿಚಾರಗಳು ಚಿಂತೆ ತರುತ್ತವೆ.
ಕಟಕ
ಮನೆ ಮತ್ತು ಕಚೇರಿ ಎರಡು ಕಡೆಯೂ ಯಶಸ್ಸು ಮತ್ತು ಸಂತೋಷ. ಮನಸ್ಸು ಕದಡುವ ರಗಳೆಗಳೆಲ್ಲ ಪರಿಹಾರ. ಆರ್ಥಿಕ ಸ್ಥಿತಿ ಸುಧಾರಣೆ.
ಸಿಂಹ
ಸಮಸ್ಯೆ ನಿಮ್ಮ ಬೆನ್ನುಬಿಡುವುದಿಲ್ಲ ಎಂಬ ಭಾವನೆ. ಅದ ರಿಂದ ರೋಸಿ ಹೋಗುತ್ತೀರಿ. ಕೊರಗಬೇಡಿ. ಒಳಿತಿನ ವಿಷಯಗಳನ್ನೂ ಗಮನಿಸಿ.
ಕನ್ಯಾ
ಅದೃಷ್ಟ ನಿಮ್ಮೊಂದಿಗಿದೆ. ಕಠಿಣವೆಂದುಕೊಂಡವು ಸುಲಭವಾಗಿ ಪರಿಹಾರ. ಆಪ್ತರ ಜತೆಗಿನ ಮುನಿಸು ತೊಲಗು ವುದು. ಕೌಟುಂಬಿಕ ಶಾಂತಿ.
ತುಲಾ
ಕೈಯಿಟ್ಟಲ್ಲೆಲ್ಲ ಸಮಸ್ಯೆ, ವಿವಾದಗಳು ನಿಮ್ಮನ್ನು ಸುತ್ತುವರಿಯುತ್ತವೆ. ಕೆಲವರು ನಿಮ್ಮ ಬಗ್ಗೆ ಟೀಕೆಯ ನುಡಿಯಾ ಡುತ್ತಾರೆ. ಗಟ್ಟಿ ಮನಸ್ಸು ಬೆಳೆಸಿಕೊಳ್ಳಿ.
ವೃಶ್ಚಿಕ
ಹೊಸ ಯೋಜನೆ, ಹೊಸ ವ್ಯವಹಾರ ಆರಂಭಿಸಲು ಸಕಾಲ. ಎಲ್ಲವೂ ನಿಮಗೆ ಪೂರಕವಾಗಿದೆ. ಧನಸಹಾಯವೂ ಒದಗುವುದು. ಆತ್ಮೀಯರಿಂದ ಪ್ರಶಂಸೆ.
ಧನು
ಸಮಸ್ಯೆಗಳು ನಿಮ್ಮನ್ನು ದಿಕ್ಕೆಡಿಸುತ್ತವೆ. ಅವನ್ನು ಆದಷ್ಟು ಬೇಗ ಪರಿಹರಿಸಿ. ಕೌಟುಂಬಿಕ ಬಿಕ್ಕಟ್ಟು ಉಲ್ಬಣ. ಆದರೆ ಸಂಜೆ ವೇಳೆಗೆ ಶುಭ ಸಂಕೇತ.
ಮಕರ
ನಿಮ್ಮ ಕಾರ್ಯವೈಖರಿ ಯಲ್ಲಿ ಬದಲಾವಣೆ ಆದೀತು. ಹೆಚ್ಚು ಉತ್ಸಾಹ ತುಂಬಿಕೊಳ್ಳುತ್ತೀರಿ. ಆರ್ಥಿಕ ವಿಷಯದಲ್ಲಿ ಪೂರಕ ಬೆಳವಣಿಗೆ.
ಕುಂಭ
ನಿಮ್ಮ ದಿನವಹಿ ಬದುಕಿನಲ್ಲಿ ಸಣ್ಣ ಬದಲಾವಣೆ ಮಾಡಿ. ಮತ್ತೆ ನೋಡಿ, ಎಲ್ಲವೂ ನಿಮಗೆ ಅನುಕೂಲ ವಾಗುವುದು. ಕಷ್ಟಗಳು ಪರಿಹಾರ ಕಾಣುವವು.
ಮೀನ
ಶಾಂತಿ, ಸಹನೆ, ವಿನಯ ಇವು ನಿಮ್ಮ ಸಹಜ ಗುಣಗಳು. ನೀವು ಇಂದು ಅವನ್ನು ಹೆಚ್ಚು ಪ್ರದರ್ಶಿ ಸಬೇಕು. ಅದರಿಂದಲೇ ಸಮಸ್ಯೆ ಪರಿಹಾರ.