ದಿನ ಭವಿಷ್ಯ : ಈ ದಿನ ಸದುಪಯೋಗ ಮಾಡಿಕೊಳ್ಳಿ, ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ

ಮೇಷ:ನಿಮ್ಮ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.ಕೌಟುಂಬಿಕ ಶಾಂತಿ.

ವೃಷಭ:ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪ್ರಾಮಾಣಿಕತೆಯಿಂದ ವರ್ತಿಸಿ. ಗಿಲೀಟಿನ ಮಾತಿಗೆ ನೀವೂ ಮರುಳಾಗಬೇಡಿ.
 
ಮಿಥುನ:ವಿವಾಹಿತರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದೀತು. ಅದರ ಪರಿಹಾರವೂ ಸುಲಭ. ಬಿಗುಮಾನ ಬಿಟ್ಟು ವ್ಯವಹರಿಸಬೇಕು.ಆರ್ಥಿಕ ಒತ್ತಡ.

ಕಟಕ: ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸೀತು.ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಲೌಕಿಕ ವಿಷಯದಲ್ಲಿ ಸಂತೋಷ ಬೇಕಾದರೆ ಮನಶ್ಯಾಂತಿ ಮುಖ್ಯ ಅರಿಯಿರಿ.

ಸಿಂಹ:ಕುಟುಂಬದಲ್ಲಿ ಸಂಬಂಧ  ಸುಧಾರಣೆ. ಮನಸ್ತಾಪ, ಭಿನ್ನಮತ ನಿವಾರಣೆ. ಆಹಾರದಲ್ಲಿ ಹಿತಮಿತ ಸಾಧಿಸಿ.ಇಲ್ಲವಾದಲ್ಲಿ ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.

ಕನ್ಯಾ: ಉದ್ಯಮ , ವ್ಯವಹಾರ,ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ನೆರೆಯವರ ಜತೆ ಕಲಹಕ್ಕೆ ಇಳಿಯಬೇಡಿ.

ತುಲಾ: ಸಮಾನಮನಸ್ಕರ ಸಂಗದಲ್ಲಿ ನೆಮ್ಮದಿ ಪಡೆಯುವಿರಿ. ನಿಮ್ಮ ವಿರೋಧಿಗಳನ್ನು ಕಡೆಗಣಿಸಿ. ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂದರಿಯಿರಿ.

ವೃಶ್ಚಿಕ: ನಿಮಗೆ ಹಿತವೆನಿಸದ ಬೆಳವಣಿಗೆ ಸಂಭವಿಸಬಹುದು. ಕೈಗೆತ್ತಿಕೊಂಡ ಕಾರ್ಯ ಬಿಡಬೇಡಿ. ಸಾಂಸಾರಿಕ ಭಿನ್ನಮತ ಹೆಚ್ಚಲು ಅವಕಾಶ ಕೊಡಬೇಡಿ.

ಧುನು:ಇತರರ ಕೆಲಸವನ್ನು ಟೀಕಿಸಲು ಹೋಗದಿರಿ.ಭವಿಷ್ಯದ ಕುರಿತಂತೆ ಚಿಂತೆ ಕಾಡಬಹುದು.ನಿಜವಾಗಿ ಅಂತಹ ಚಿಂತೆ ಅನವಶ್ಯ. ನಿರಾಳವಾಗಿರಿ.

ಮಕರ: ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಸರಿಯಾಗಿ ಪರಾಮರ್ಶಿಸಿ.

ಕುಂಭ: ಎಲ್ಲ ವಿಷಯಗಳಲ್ಲಿ ಪಾಸಿಟಿವ್ ಆಗಿ ಯೋಚಿಸಿ. ನೆಗೆಟಿವ್ ಚಿಂತನೆ ಬೇಡ. ಮನೆಯ ಸದಸ್ಯರ ಜತೆ ಸಂತೋಷದ ಕಾಲಕ್ಷೇಪ. ಆರ್ಥಿಕ ಪ್ರಗತಿ.

ಮೀನ: ಕೆಲವು ವಿಷಯಗಳ ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!