ದಿನಭವಿಷ್ಯ: ದೈಹಿಕವಾದ ನೋವಿನಿಂದ ಇಂದು ಮುಕ್ತಿ ದೊರೆಯಲಿದೆ, ಆರೋಗ್ಯದ ಬಗ್ಗೆ ಗಮನ ಇರಲಿ!

ಭಾನುವಾರ, 21 ಫೆಬ್ರವರಿ 2022

ಮೇಷ
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲ ಕಳೆಯುವ ಸಂದರ್ಭ. ಇತರ ಕೆಲಸದ ಒತ್ತಡ ಹೆಚ್ಚಿದ್ದರೂ ಅದನ್ನು ಬದಿಗೆ ಸರಿಸಿ. ಆರ್ಥಿಕ  ಒತ್ತಡ ನಿವಾರಣೆ.

ವೃಷಭ
ಗ್ರಹಗತಿ ನಿಮಗೆ ಪೂರಕವಾಗಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಗಾತಿಯನ್ನು ತೋರಿಸಿ ಕೊಡಲಿದೆ. ಆತ್ಮೀಯ ಸಂಬಂಧದಲ್ಲಿ ಅಭಿವೃದ್ಧಿ.

ಮಿಥುನ
ನೀವು ಇಷ್ಟಪಡುವ ವ್ಯಕ್ತಿಯ ಜತೆ ಕಾಲ ಕಳೆಯುವ ಅವಕಾಶ. ಉದ್ಯಮಿ ಗಳಿಗೆ ತುಸು ಆರ್ಥಿಕ ಸಂಕಷ್ಟ. ಶಾಪಿಂಗ್ ವೇಳೆ ಖರ್ಚಿನ ಮೇಲೆ ನಿಗಾ ಇಡಿ.

ಕಟಕ
ಮನೆಯ ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು. ಶಾಂತಿಯಿಂದ ಕೆಲಸ ಮಾಡಲು ಸಾಧ್ಯವಾಗದು. ಹಣಕಾಸು ತೊಂದರೆ ಕಾಡಬಹುದು.

ಸಿಂಹ
ಸಹಚರರ ಜತೆಗೆ  ವೈಮನಸ್ಸು  ಮೂಡಬಹುದು. ಅದನ್ನು ವಿಪರೀತಕ್ಕೆ ಕೊಂಡೊಯ್ಯದಿರಿ. ಬಾಕಿಯಿರುವ ಕೆಲಸ ಪೂರೈಸಿರಿ.

ಕನ್ಯಾ
ಏರುಪೇರುಗಳಿಲ್ಲದ ದಿನ. ಖಾಸಗಿ ಬದುಕಿನಲ್ಲಿ ಸಣ್ಣಪುಟ್ಟ ಅಸಮಾಧಾನ ಉಂಟಾಗಬಹುದು. ಅದನ್ನು ಹೆಚ್ಚು ಹಿಗ್ಗಿಸಲು ಹೋಗದಿರಿ.

ತುಲಾ
ಮನೆಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದನ್ನು ನಿಭಾಯಿಸುವಲ್ಲಿ ತೊಡಕು. ಕೆಲವರ ಟೀಕೆ ಕೇಳುವಿರಿ. ನಿಮ್ಮ ವರ್ತನೆ ತಿದ್ದಿಕೊಳ್ಳಲು ಪ್ರಯತ್ನಿಸಿ.

ವೃಶ್ಚಿಕ
ದೈಹಿಕ ನೋವಿನಿಂದ ಬಳಲುತ್ತಿದ್ದರೆ ಇಂದು ಅದರಿಂದ ಮುಕ್ತಿ. ಕೌಟುಂಬಿಕ ಹೊಣೆಗಾರಿಕೆ ಸಡಿಲ.ಈ ವಿಷಯದಲ್ಲಿ  ಇತರರ ನೆರವು ಲಭಿಸುವುದು.

ಧನು
ಕೌಟುಂಬಿಕ ಉದ್ವಿಗ್ನತೆ ನಿವಾರಣೆ. ಮನಶ್ಶಾಂತಿ ನೆಲೆಸುವುದು. ನಿಮ್ಮನ್ನು ತಿದ್ದಿಕೊಳ್ಳಲು ಯತ್ನಿಸುವುದರಿಂದ ಮಾನಸಿಕ ನೆಮ್ಮದಿ ಪಡೆಯುವಿರಿ.

ಮಕರ
ಇತರರ ವ್ಯವಹಾರದಲ್ಲಿ ಮೂಗು ತೂರಿಸಿದರೆ ನಿಮಗೇ ತೊಂದರೆ. ಎಲ್ಲರಿಂದ ವಿರೋಧ ಎದುರಿಸುವಿರಿ.  ದೇವರ ಪ್ರಾರ್ಥನೆಯಿಂದ ಶಾಂತಿ.

ಕುಂಭ
ನೀವು ಇಂದು ಏನು ಗುರಿ ಹಾಕಿಕೊಂಡಿ ದ್ದೀರೋ ಅದು ಸಾತ ವಾಗದು. ಅಡ್ಡಿಗಳು ಒದಗುತ್ತವೆ. ಕೆಲವರಿಂದ ಅಸಹಕಾರ. ಕೌಟುಂಬಿಕ ಕಿರಿಕಿರಿ.

ಮೀನ
ಕಷ್ಟ ಬಂದರೂ ಅದನ್ನು ಎದುರಿಸು ವಿರಿ. ನಿಮ್ಮ ತಾಳ್ಮೆ, ಹೊಣೆಗಾರಿಕೆ, ನಿಷ್ಠೆ ಯಾವುದೇ ಕೆಲಸ ಪರಿಪೂರ್ಣವಾಗಲು ಸಹಕರಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!