ಮೇಷ
ಪ್ರಗತಿಗೆ ಸುಲಭ ದಾರಿ ಕಾಣಲಿದೆ. ಅದನ್ನು ಅನುಸರಿಸಿ. ಹಳೆ ಹೂಡಿಕೆಯಿಂದ ಲಾಭ. ಹಿರಿಯರಿಗೆ ಆರೋಗ್ಯದ ಸಮಸ್ಯೆ ಸಂಭವ.
ವೃಷಭ
ಅದೃಷ್ಟ ನಂಬಿ ಕೂರದಿರಿ. ಪ್ರಯತ್ನ ಪಟ್ಟರಷ್ಟೆ ಫಲ. ಪ್ರೀತಿಪಾತ್ರರಿಂದ ಶುಭ ಸುದ್ದಿ ಕೇಳಲಿದೆ. ಆರೋಗ್ಯ ಸಮಸ್ಯೆ ಪರಿಹಾರ.
ಮಿಥುನ
ಈ ದಿನ ಏನೋ ಕೊರತೆ ನಿಮಗೆ ಕಾಡಲಿದೆ. ವೃತ್ತಿಯಲ್ಲಿ, ಖಾಸಗಿ ಬದುಕಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.
ಕಟಕ
ನಿಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಲಿ. ಬಯಸಿದ್ದನ್ನು ಸಾಧಿಸುವುದು ನಿಮಗೆ ಕಷ್ಟವಾಗಲಾರದು. ಆರ್ಥಿಕ ಉನ್ನತಿ.
ಸಿಂಹ
ವ್ಯವಸ್ಥಿತವಾಗಿ ನಿಮ್ಮ ಕಾರ್ಯ ನಿರ್ವಹಿಸಿ. ಕೌಟುಂಬಿಕ ವಿಚಾರದಲ್ಲಿ ವಾಗ್ವಾದ ನಡೆದೀತು. ಸ್ನೇಹದಿಂದ ವರ್ತಿಸಿ. ಅದರಿಂದಲೇ ಒಳಿತು.
ಕನ್ಯಾ
ನಿಮ್ಮ ನೇರ ನಡೆನುಡಿ ಕೆಲವರ ಜತೆ ಸಂಬಂಧ ಕೆಡಿಸಬಹುದು. ಕೆಲ ಸಂದರ್ಭಗಳಲ್ಲಿ ಭಾವನೆ ಮುಚ್ಚಿಡುವುದು ಒಳ್ಳೆಯದು.
ತುಲಾ
ಎಂದಿಗಿಂತ ತುಸು ಭಿನ್ನವಾದ ದಿನ. ಚಿಂತೆ ಕಳೆದು ನಿರಾಳತೆ ಅನುಭವಿಸುವಿರಿ. ನಿಮ್ಮ ಯಾವುದೇ ನಿರ್ಧಾರ ಒಳ್ಳೆಯ ಫಲ ನೀಡಲಿದೆ.
ವೃಶ್ಚಿಕ
ನಿಮ್ಮ ಭಾವನೆಗೆ ಆಪ್ತರಿಂದ ಸೂಕ್ತ ಸ್ಪಂದನೆ ಸಿಗಲಿದೆ. ಆರ್ಥಿಕವಾಗಿ ಸುದಿನ. ನಿಮ್ಮ ಪ್ರಗತಿ ಕೆಲವರಿಗೆ ಅಸೂಯೆ ಹುಟ್ಟಿಸಬಹುದು.
ಧನು
ನಿಮ್ಮ ಬದುಕಲ್ಲಿ ಮಹತ್ವದ ಬದಲಾವಣೆ ಉಂಟಾದೀತು. ನಿಮ್ಮ ದೃಷ್ಟಿಕೋನ ಬದಲಿಸುವ ಪ್ರಸಂಗ ಒದಗೀತು. ಕೌಟುಂಬಿಕ ಸಮಾಧಾನ.
ಮಕರ
ದಿನದೊಳಗೆ ಮುಗಿಸಬೇಕಾದ ಮಹತ್ವದ ಹೊಣೆಗಳಿವೆ. ನಿಮ್ಮ ವ್ಯವಹಾರವೊಂದು ಸಂಕಷ್ಟ ಉಂಟು ಮಾಡೀತು, ಎಚ್ಚರವಿರಿ.
ಕುಂಭ
ನಿಮ್ಮ ಗುರಿ ಸಾಧನೆ ಕಷ್ಟವಾಗಲಿದೆ. ಅನಿರೀಕ್ಷಿತ ಅಡ್ಡಿ, ಆತಂಕ ಎದುರಿಸುವಿರಿ. ಆರ್ಥಿಕ ಅಡಚಣೆ. ಉದ್ಯೋಗದಲ್ಲಿ ಹೊಣೆ ಹೆಚ್ಚಳ.
ಮೀನ
ಬಿಡುವಿಲ್ಲದ ದಿನ. ಗುರಿ ಸಾಧಿಸುವ ಮೂಲಕ ತೃಪ್ತಿ ಪಡೆಯುವಿರಿ. ಕಾರ್ಯ ಸುಗಮ. ಕೌಟುಂಬಿಕ ಒತ್ತಡ ನಿವಾರಣೆ. ಧನಪ್ರಾಪ್ತಿ.